ಮಂಗಳೂರು : ಶಾಲೆಯ ಮಕ್ಕಳಿಗೆ ಶಿಕ್ಷಕಿಯರು ವಿದ್ಯೆ ಬುದ್ದಿಯಾ ಬಗ್ಗೆ ತಿಳಿಸಬೇಕೇ ಹೊರತು ಜಾತಿ ಧರ್ಮದ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಆದರೆ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಜೆರೋಸಾ ಹೈ ಸ್ಕೂಲ್ ನಲ್ಲಿ ಇಂತಹ ಒಂದು ಸುದ್ದಿ ಹರಡಿದೆ.

ನಿನ್ನೆ 7 ನೇ ಕ್ಲಾಸಿನಲ್ಲಿ ಶಿಕ್ಷಕಿ (ಸಿಸ್ಟರ್) ಪ್ರಭಾ ಎಂಬ ಶಿಕ್ಷಕಿಯೂ ವರ್ಕ್ ಐಸ್ ವರ್ಶಿಪ್ ಎಂಬ ಪಾಠದ ಬಗ್ಗೆ ಮಕ್ಕಳಿಗೆ ಕ್ಲಾಸ್ ನಡೆಸುತ್ತಿದ್ದ ವೇಳೆ ಪಾಠಕ್ಕೆ ಸಂಬಂದಿಸಿದ ವಿಚಾರವನ್ನು ಮಾತನಾಡುವ ಬದಲು ಪಾಠಕ್ಕೆ ಸಂಬಂಧಿಸದ ವಿಚಾರಕ್ಕೆ ಮಕ್ಕಳಜೊತೆ ಮಾತಾಡಿ ಸುದ್ದಿಯಾಗಿದ್ದು,ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಧರ್ಮ ವಿರೋಧಿ ಭಾವನೆಯನ್ನು ಮೂಡಿಸಲು ಯತ್ನ ಮಾಡಲಾಗಿದ್ದಾರೆ. ಅಲ್ಲದೆ ಅವಹೇಳನದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಲು ನಿರ್ಧರಿಸಿದ್ದು, ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣದಲ್ಲಿ ಸೇರುವಂತೆ ಆಡಿಯೋದಲ್ಲಿ ಹೇಳಲಾಗಿದೆ.ಸಂದೇಶ ವೈರಲ್ ಹಿನ್ನೆಲೆ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.
7 ನೇ ಕ್ಲಾಸಿನ ಮಕ್ಕಳ ಬಳಿ ನಿಮಗೆ ಮಸೀದಿ ಒಡೆದು ರಾಮಮಂದಿರ ಕಟ್ಟುವ ಆಗತ್ಯೇ ಇದೆಯಾ,ನೀವು ಕಲ್ಲನ್ನು ಅಲಂಕಾರ ಮಾಡಿ ಅಲ್ಲಿ ಕುತ್ಕೊಳ್ಳಿಸಿ ರಾಮ ಬಂದು ಏನು ಕುಳಿತುಕೊಳ್ತಾನಾ ,ನೀವು ಯಾಕೆ ದೇವಸ್ಥಾನಕ್ಕೆ ಹೋಗ್ತೀರಾ ,ಅಲ್ಲಿ ಇರುವುದು ಕಲ್ಲು ,ನೀವು ಹಿಂದುಗಳಿಗೆ ಅಸ್ಥಿತ್ವನೆ ಇಲ್ಲ ,ನೀವು ಎಲ್ಲಿದ್ದೀರಿ ,ನಿಮ್ಮ ಮೂಲಯೇನೆಂಬುದು ನಿಮಗೆ ಗೊತ್ತಿಲ್ಲ ,ನೀವು ಇದ್ದರೆ ಭಾರತದಲ್ಲಿ ಮಾತ್ರ ಹಿಂದೂ ಹಿಂದೂ ಅಂತ ಹೇಳ್ತಿರಿ ಬೇರೆ ಎಲ್ಲಿಯೂ ನೀವು ಇಲ್ಲ ,ಗೋದ್ರಾ ಹತ್ಯೆಯ ಸಮಯದಲ್ಲಿ ಗುಜರಾತಿನಲ್ಲಿ ಮೋದಿ ಇದ್ದದ್ದು ,ದಂಡ ಪಿಂಡಗಳನ್ನು ಕೊಂಡು ಹೋಗಿ ಬಾಂಬ್ ಹಾಕಿದ್ದು ಮೋದಿಯವರು ,ಅದರಲ್ಲಿ ಸತ್ತವರು ಮುಸ್ಲಿಮರು,ಒಂದು ಬಸೂರಿ ಮಹಿಳೆಯನ್ನು ಕೊಂದು ಹಾಕಿದ್ದೀರಿ,ಹಾಗೂ 12 ಜನ ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ,ಮುಸ್ಲಿಂ ಮಕ್ಕಳನ್ನು ತಲೆಗೆ ಕಲ್ಲು ಹೊಡೆದು ಕೊಂದಿದ್ದಾರೆ,ನೀವು ಹಿಂದೂಗಳು ನೀಚರು ,ಎಂಬ ವಿಚಾರ ಕ್ಲಾಸಿನಲ್ಲಿ ಮಾತನಾಡಿದ ವಿಚಾರವನ್ನು ಶಾಲೆಯ ಮಕ್ಕಳು ಪೋಷಕರಿಗೆ ತಿಳಿಸಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿದೆ.ಈ ಬಗ್ಗೆ ಪೋಷಕರು ಶಿಕ್ಷಕಿಯ ವಿರುದ್ಧ ಆಕ್ರೋಶ ಗೊಂಡಿದ್ದು ಶಾಲೆಗೆ ಬಂದು ಶಿಕ್ಷಕಿಯ ವಿರುದ್ಧ ಹರಿಹಾಯ್ದಿದ್ದಾರೆ.
ಶಾಲೆಯ ಶಿಕ್ಷಕಿ ಮಕ್ಕಳಿಗೆ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಸಾಹಸಕ್ಕೆ ಕೈಹಾಕಿರುವುದು ವಿಪರ್ಯಾಸ, ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳು ಇರುವುದು ಇತಿಹಾಸ,ಬ್ರಿಟಿಷರು ,ಮೊಗಲರು ಭಾರತಕ್ಕೆ ಆಕ್ರಮಣ ಮಾಡಿ ಹಿಂದುಗಳನ್ನು ಮತಾಂತರ ಮಾಡಿರುವುದೇ ನಿಜವಾದ ಇತಿಹಾಸ ಇಂಥಹದರಲ್ಲಿ ತಲೆಯಲ್ಲಿ ಧರ್ಮದ ಬಗ್ಗೆ ಸಗಣಿ ತುಂಬಿಸುವ ಶಿಕ್ಷಕಿಯರನ್ನು ನೇಮಕ ಮಾಡುವುದು ಆಡಳಿತ ಮಂಡಳಿಯ ವೈಫಲ್ಯ ಎಂಬುದು ಪೋಷಕರ ಮಾತು.
ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮಕೈಗೊಳ್ಳಬೇಕೆಂದು ವಿಎಚ್ ಪಿ ಪ್ರಾಂತ ಸಹಸಂಯೋಜಕ್ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರು ಆಡಳಿತ ಮಂಡಳಿ ಜೊತೆ ಮಾತನಾಡಿ ಜೆರೋಸಾ ಶಾಲೆ ಒಳಗಿನಿಂದ ಹೊರಬರುತ್ತಿದ್ದಂತೆ ಮುತ್ತಿಗೆ ಹಾಕಿದರು.ಸೋಮವಾರದವರೆಗೂ ಕಾಯೋಣ. ಕೊಲೆ ಮಾಡಿದವನು ಅಪರಾಧಿ ಅಂತ ತನಿಖೆ ಬಳಿಕ ಗೊತ್ತಾಗುತ್ತದೆ. ಅದೇ ರೀತಿ ಈ ಘಟನೆಯ ಸತ್ಯಾಸತ್ಯತೆ ತನಿಖೆ ಬಳಿಕ ಗೊತ್ತಾಗಲಿದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ


