Thursday, July 23, 2026
Homeವಿದೇಶನ್ಯೂಯಾರ್ಕ್ : ಟೇಕ್ ಆಫ್ ಬಳಿಕ ಹಾರಿದ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಬಾಗಿಲು.

ನ್ಯೂಯಾರ್ಕ್ : ಟೇಕ್ ಆಫ್ ಬಳಿಕ ಹಾರಿದ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಬಾಗಿಲು.

ನ್ಯೂಯಾರ್ಕ್ : ಟೇಕ್ಆ ಫ್ ಆದ ಕೆಲವೇ ಸಮಯದಲ್ಲಿ ಬೋಯಿಂಗ್ ೭೩೭ ಮ್ಯಾಕ್ಸ್ ವಿಮಾನದ ಬಾಗಿಲು ಹಾರಿಹೋದ ಘಟನೆ ಪ್ರಯಾಣಿಕರನ್ನು ದಂಗು ಬಡಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಈ ಮೂಲಕ ಬೋಯಿಂಗ್ ವಿಮಾನಗಳು ಸುರಕ್ಷಿತವಲ್ಲ ಎನ್ನುವ ಸಂಗತಿ ಮತ್ತೊಮ್ಮೆ ಬಯಲಾಗಿದೆ ಎಂದು ವರದಿಯೊಂದು ಈ ವಿಷಯ ತಿಳಿಸಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅಮೆರಿಕಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಜನವರಿಯಲ್ಲಿ ಅಲಾಸ್ಕಾಕ್ಕೆ ಹೊರಟಿದ್ದ ವಿಮಾನದಲ್ಲಿ ನಡೆದ ಘಟನೆಯ ತನಿಖೆ ಕೈಗೊಳ್ಳಲಾಗಿದೆ. ಫ್ಯೂಸ್ಲೇಜ್‌ಗೆ ಬಳಕೆಯಾಗದ ಬಾಗಿಲನ್ನು ಲಾಕ್ ಮಾಡಲು ಉದ್ದೇಶಿಸಲಾದ ನಾಲ್ಕು ಪ್ರಮುಖ ಬೋಲ್ಟ್ಗಳು ಕಾಣೆಯಾಗಿವೆ . ಇದಕ್ಕೆ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೋಯಿಂಗ್‌ನ ಅಧ್ಯಕ್ಷ ಡೇವ್ಕ್ಯಾ ಲ್ಹೌನ್ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ ಬೋಯಿಂಗ್ ಕಾರ್ಖಾನೆಯಿಂದ ಹೊರಡುವ ವಿಮಾನದಲ್ಲಿ ಈ ರೀತಿಯ ಘಟನೆ ಸಂಭವಿಸಬಾರದು. ನಾವು ನಮ್ಮ ಗ್ರಾಹಕರು ಮತ್ತು ಅವರ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ. ಸಂಸ್ಥೆಯಿಂದ ತಯಾರಾಗಲು ವಿಮಾನಗಳ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪಾಲುದಾರರ ವಿಶ್ವಾಸವನ್ನು ಬಲಪಡಿಸಲು ಸಮಗ್ರ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಅಲಾಸ್ಕಾ ಏರ್ ಲೈನ್ಸ್ ಫ್ಲೈಟ್ ೧೨೮೨ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಬಳಕೆಯಾಗದ ತುರ್ತು ನಿರ್ಗಮನವನ್ನು ಒಳಗೊಂಡ ಫಲಕವನ್ನು ಒಳಗೊಂಡಿತ್ತು. ಇದನ್ನು ಡೋರ್ ಪ್ಲಗ್ ಎಂದು ಕರೆಯಲಾಗುತ್ತದೆ. ಇದು ಹಠಾತ್ತನೆ ಸ್ಫೋಟಗೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular