ಮಂಗಳೂರು : ಕಳೆದ ಬಾರಿ ಪುತ್ತೂರಿನಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ಬಿಜೆಪಿಯಿಂದ ಸೀಟ್ ಕೊಡುತ್ತಿದ್ದಾರೆ ಇಷ್ಟೋತ್ತಿಗೆ ಶಾಸಕರಾಗುತ್ತಿದ್ದರು ಎಂಬುದು ನೈಜ ಹಿಂದೂ ಕಾರ್ಯಕರ್ತರ ಮಾತು ,ನಳೀನ್ ಕುಮಾರ್ ಕಟೀಲ್ ಹಾಗೂ ಇನ್ನಿತರ ಹರೆಬರೆ ನಾಯಕರ ಮಾತು ಕೇಳಿ ಹೈ ಕಮಾಂಡ್ ಒಂದು ವಿಧಾನ ಸಭಾ ಸೀಟ್ ಕಳೆದುಕೊಂಡಿದೆ ಇದರಲ್ಲೂ ರಾಜಕೀಯ ಇದೆ ಯಾಕೆಂದರೆ ಅಶೋಕ್ ರೈ ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಬಿಜೆಪಿ ಸೇರ್ಪಡೆಗೆ ಗಡುವು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ. ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಗಡುವು ವಿಧಿಸಿರುವುದರ ಜತೆಗೆ ಕೆಲವೊಂದು ಷರತ್ತುಗಳನ್ನೂ ಪುತ್ತಿಲ ಆವರಿಗೆ ಬಿಜೆಪಿ ನಾಯಕರು ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು (ಸೋಮವಾರ) ಅರುಣ್ ಪುತ್ತಿಲ ಸಮಾಲೋಚನಾ ಸಭೆ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಅವರು ಹುಟ್ಟುಹಾಕಿರುವ ಪುತ್ತಿಲ ಪರಿವಾರದ ಸಭೆ ನಡೆಯಲಿದ್ದು, ಅಂತಿಮ ತೀರ್ಮಾನದ ಬಗ್ಗೆ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಯಲಿದೆ.
ಬಿಜೆಪಿಗೆ ಸಡ್ಡು ಹೊಡೆದು ಅರಂಭಗೊಂಡಿದ್ದ ಪುತ್ತಿಲ ಪರಿವಾರ ಮತ್ತು ಅದರ ಮುಖಂಡರಿಂದ ನಿರಂತರವಾಗಿ ಬಿಜೆಪಿ ವಿರುದ್ಧ ಚಟುವಟಿಕೆ ನಡೆಯುತ್ತಿದೆ ಎಂದು ಬಿಜೆಪಿಯ ಹಲವು ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಬಿಜೆಪಿಗೆ ವಿರುದ್ಧವಾಗಿ ಆರಂಭಿಸಿರುವ ಪುತ್ತಿಲ ಪರಿವಾರ ವಿಸರ್ಜಿಸಿ ಬರುವಂತೆ ಷರತ್ತು ವಿಧಿಸಲಾಗಿದೆ ಎನ್ನಲಾಗಿದೆ. ಸೂಕ್ತ ಸ್ಥಾನಮಾನ ದೊರೆತರಷ್ಟೇ ಬಿಜೆಪಿ ಜೊತೆ ಬರುವ ಸೂಚನೆಯನ್ನು ಅರುಣ್ ಪುತ್ತಿಲ ಈಗಾಗಲೇ ನೀಡಿದ್ದಾರೆ. ಇಂದಿನ ಸಭೆಯ ಬಳಿಕ ಪುತ್ತಿಲ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.ಆದರೆ ಇದಕ್ಕೆ ಕಾರ್ಯಕರ್ತರು ಒಪ್ಪುತ್ತಾರಾ ಎಂಬುದು ತಿಳಿಯಬೇಕಾಗಿದೆ.ಪುತ್ತಿಲ ಪರಿವಾರ ವಿಸರ್ಜನೆ ಬಗ್ಗೆಯೂ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಹಲವು ವರುಷಗಳಿಂದ ಹಿಂದೂ ಸಂಘಟನೆ ಹಾಗೂ ಪಕ್ಷದ ಬೆಳವಣಿಗೆಗೆ ಶ್ರಮವಹಿಸಿದ್ದ ಪುತ್ತಿಲ ರವರನ್ನು ಬಿಜೆಪಿಯಾ ಹಲವು ನಾಯಕರು ಮೂಲೆ ಗುಂಪು ಮಾಡಲು ಹೊರಟಿದ್ದರು ಈ ಬಗ್ಗೆ ಸ್ವತಃ ಪುತ್ತಿಲ ರವರೆ ಆಪ್ತ ವಲಯಗಳಿಗೆ ತಿಳಿಸಿದ್ದರು ಆದರೆ ವಿಧಾನಸಭೆ ಚುನಾವಣೆಯ ನಂತರದ ಬೆಳವಣಿಗೆಗಳಲ್ಲಿ ಪುತ್ತಿಲ ಅವರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಜತೆ ಮಾತುಕತೆ ನಡೆಸಿ ಬಂದಿದ್ದರು. ಆದಾಗ್ಯೂ, ನಂತರ ನಡೆದ ಸ್ಥಳೀಯ ಕೆಲವು ಉಪ ಚುನಾವಣೆಗಳಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಂದು ಕಡೆ ಗೆಲುವೂ ಪುತ್ತಿಲ ಪರಿವಾರದ್ದಾಗಿತ್ತು.ಈ ಹಿಂದೆ ಪುತ್ತಿಲ ಅವರು ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು ಆದರೆ ಇಲ್ಲಿನ ಹಲವು ಬಿಜೆಪಿ ನಾಯಕರು ಪುತ್ತಿಲ ರವರ ಬೆಳವಣಿಗೆಯನ್ನು ಕಂಡು ಪಕ್ಷದಲ್ಲಿ ಯಾವುದೇ ಸ್ಥಾನ ದೊರಕದಂತೆ ಅಡ್ಡಗಾಲು ಇಟ್ಟಿರುವುದಂತೂ ನಿಜವಾದ ಸಂಗತಿ ,ಮುಂದೆ ಅರುಣ್ ಕುಮಾರ್ ಪುತ್ತಿಲ ರವರ ರಾಜಕೀಯ ಭವಿಷ್ಯ ಏನಾಗೋತ್ತೋ ಎಂಬುದು ಕಾದುನೋಡಬೇಕಾಗಿದೆ.


