ಕಲಬುರಗಿ : ಜಿಲ್ಲೆಯಾ ಯಡ್ರಾಮಿ ತಾಲ್ಲೂಕಿನ ಮಾಗಣಗೇರಿ ಗ್ರಾಮದಲ್ಲಿ ಪ್ರೇಮಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ .
ಗೊಲ್ಲಾಳಪ್ಪ ಮತ್ತು ಶಶಿಕಲಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ವರಸೆಯಲ್ಲಿ ಇವರು ಅಣ್ಣ ತಂಗಿ ಆಗುತ್ತಾರೆ ಎಂದು ಹಿರಿಯರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ ಶಶಿಕಲಾ ಅವಳಿಗೆ ಬೇರೆ ಕಡೆ ಮದುವೆ ನಿಶ್ಚಿಯ ಮಾಡಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಅರಿತ ಪ್ರೇಮಿಗಳು ಊರು ಹೊರಗಿನ ದೇವಸ್ಥಾನದಲ್ಲಿ ಮದುವೆ ಆಗಿ ಸೆಲ್ಫಿ ತೆಗೆದುಕೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


