ಮಂಗಳೂರು : ಕರಾವಳಿಗರ ಅಭಿಮಾನ ಯಾವತ್ತೂ ಹೃದಯದಲ್ಲಿ ಇರುತ್ತೆ ಹೊರತು ಹೊರನೋಟಕ್ಕೆ ತೋರಿಸಿಕೊಳ್ಳುವುದು ಬಹಳ ವಿರಳ.ಆದರೆ ಡ್ರೋನ್ ಪ್ರತಾಪ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿಮಾನಿ ಇರುವುದೆಂದರೆ ಹೆಮ್ಮೆಯ ವಿಚಾರ.ಡ್ರೋನ್ ಪ್ರತಾಪ್ ವಿನ್ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆದದ್ದೇ ಆಟ ಬೇರೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅಭಿಮಾನಿಗಳಲ್ಲಿ ಅಂತೂ ಬೇಸರ ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನಿಯೊಬ್ಬ, ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾನೆ.
ಈ ಅಭಿಮಾನಿಗಳೇ ಹೀಗೆ ಏನೇನೊ ಚಾಲೆಂಜ್ ಹಾಕ್ತಾರೆ ಇಂತಹ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂಟ್ರ ಗ್ರಾಮದಲ್ಲಿ ನಡೆದಿತ್ತು . ಬಿಗ್ ಬಾಸ್ ಸೀಸನ್ 10 ರಲ್ಲಿ ಪ್ರತಾಪ್ ವಿನ್ನರ್ ಆಗುತ್ತಾರೆ ಎಂದು ಹೇಳಿಕೊಂಡಿದ್ದ ಯುವಕ ಒಂದು ವೇಳೆ ಸೋತರೆ ಅರ್ಧ ಮೀಸೆ, ಗಡ್ಡ ತೆಗೆಯುವುದಾಗಿ ಹಾಗೂ ಜೊತೆಗೆ ಹಸಿಮೆಣಸಿನಕಾಯಿ ತಿನ್ನುವುದಾಗಿ ಚಾಲೆಂಜ್ ಹಾಕಿದ್ದನು ಇದರ ಪರಿಣಾಮ ಡ್ರೋನ್ ಪ್ರತಾಪ್ ಅಭಿಮಾನಿಯಾಗಿದ್ದ ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಝೈನುಲ್ ಆಬಿದ್ ಇದರ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಚಾಲೆಂಜ್ ಪ್ರಕಾರ ಅರ್ಧ ಮೀಸೆ ಬೋಳಿಸಿದ್ದೇನೆ ಎಂದು ಜಾಲತಾಣದಲ್ಲಿ ವಿವರಿಸಿದ್ದಾನೆ.
ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ನೋಡಿದ ನೆಟ್ಟಿಗರು ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ.ಇದೀಗ ಪ್ರತಾಪ್ ರನ್ನರ್ ಅಪ್ ಆಗಿದ್ದರಿಂದ ಅಭಿಮಾನಿ ಝೈನುಲ್ ಆಬಿದ್ ನುಡಿದಂತೆ ನಡೆದುಕೊಂಡಿದ್ದು, ಅರ್ಧ ಮೀಸೆ, ಗಡ್ಡವನ್ನು ಬೋಳಿಸಿ ಹಸಿಮೆಣಸಿನಕಾಯಿ ತಿಂದಿದ್ದಾನೆ. ಡ್ರೋನ್ ಪ್ರತಾಪ್ ಮೇಲಿನ ಅಭಿಮಾನಕ್ಕೆ ಶರಣಾಗಿದ್ದಾನೆ.