ನವದೆಹಲಿ : ದೇಶದ (ರಾಷ್ಟ್ರಪತಿ ) ಅಧ್ಯಕ್ಷೆ ದ್ರೌಪದಿ ಮುರ್ಮು ಶುಕ್ರವಾರ (ಜನವರಿ 26) ಕರ್ತವ್ಯ ಪಥದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ 75 ನೇ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಆಗಮಿಸಿದ ರಾಷ್ಟ್ರಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ಸಮಯ-ಗೌರವದ ಸಂಪ್ರದಾಯಗಳಿಗೆ ಅನುಗುಣವಾಗಿ, ರಾಷ್ಟ್ರೀಯ ಧ್ವಜವನ್ನು ಬಿಚ್ಚಿಡಲಾಯಿತು, ನಂತರ ರಾಷ್ಟ್ರಗೀತೆ, ಸ್ಥಳೀಯ 105-ಎಂಎಂ ಭಾರತೀಯ ಫೀಲ್ಡ್ ಗನ್ಗಳೊಂದಿಗೆ ಕಾರ್ಯಗತಗೊಳಿಸಲಾದ 21-ಗನ್ ಸೆಲ್ಯೂಟ್ನ ಪ್ರಬಲ ಪ್ರತಿಧ್ವನಿಗಳೊಂದಿಗೆ ಗೌರವಿಸಲಾಯಿತು. ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರದ ಸೇವೆಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು.
ಕರ್ತವ್ಯ ಪಥದಲ್ಲಿ ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಮಹಿಳೆಯರ ಮೇಲೆ ಕೇಂದ್ರೀಕೃತವಾಗಿರುತ್ತದೆ, ಇದು ‘ವಿಕ್ಷಿತ್ ಭಾರತ್’ ಮತ್ತು ‘ಭಾರತ್ – ಲೋಕತಂತ್ರ ಕಿ ಮಾತೃಕಾ’ ವಿಷಯಗಳನ್ನು ಒಳಗೊಂಡಿರುತ್ತದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗಣರಾಜ್ಯೋತ್ಸವ ಪರೇಡ್ 2024 ರಲ್ಲಿ ಮುಖ್ಯ ಅತಿಥಿಯಾಗಿದ್ದಾರೆ. ಗಣರಾಜ್ಯೋತ್ಸವ ವಿಜಯ್ ಚೌಕ್ನಿಂದ ಕರ್ತವ್ಯ ಪಥದವರೆಗೆ ಬೆಳಿಗ್ಗೆ 10:30 ಕ್ಕೆ ಮೆರವಣಿಗೆ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯು ವ್ಯಾಪಕ ಭದ್ರತಾ ನಿಯೋಜನೆಯಲ್ಲಿದೆ, ನಗರದಾದ್ಯಂತ 70,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ, ಗಣರಾಜ್ಯೋತ್ಸವದ ಪರೇಡ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು 14,000 ಸಿಬ್ಬಂದಿ ಕರ್ತವ್ಯ ಪಥದಲ್ಲಿ ಮತ್ತು ಸುತ್ತಮುತ್ತ ನೆಲೆಸಿದ್ದಾರೆ.
ಗಣರಾಜ್ಯೋತ್ಸವದಲ್ಲಿ 16 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, 9 ಸಚಿವಾಲಯಗಳು, ವಿವಿಧ ಸಂಸ್ಥೆಗಳ 25 ಸ್ತಬ್ಧಚಿತ್ರಗಳ ಪ್ರದರ್ಶನ ಮಾಡಲಾಯಿತು. ಆಂಧ್ರ, ಅರುಣಾಚಲ ಪ್ರದೇಶ, ಛತ್ತೀಸ್ಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಲಡಾಖ್, ಮೇಘಾಲಯ, ಒಡಿಶಾ, ಮಣಿಪುರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಯುಪಿ ಸ್ತಬ್ಧಚಿತ್ರಗಳು ಭಾಗಿಯಾಗಿದ್ದವು. ಆದ್ರೆ ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಇರಲಿಲ್ಲ.
ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಸೀರೆ ಪ್ರದರ್ಶನ. ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಯೋಜಕತ್ವದಲ್ಲಿ ದೇಶದ ಸುಮಾರು 1,900 ಪ್ರಕಾರಗಳ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನಕ್ಕೆ ‘ಅನಂತ’ ಸೂತ್ರ ಎಂದು ಹೆಸರಿಡಲಾಗಿದೆ. ಕಸೂತಿ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನದಲ್ಲಿ ಮೈಸೂರು ರೇಷ್ಮೆ ಸೀರೆ, ಕಾಂಚೀಪುರಂ ಸೀರೆ, ಕಾಶ್ಮೀರದ ಕಾಶಿದಾ ಸೀರೆ ಸೇರಿ ಮುಂತಾದ ಸೇರಿಗಳ ಪ್ರದರ್ಶನ ಮಾಡಲಾಯಿತು.
ಫ್ರಾನ್ಸ್ ಸೇನಾ ತುಕಡಿ, ಯುದ್ಧವಿಮಾನಗಳು ಪಥಸಂಚನದಲ್ಲಿ ಭಾಗಿಯಾಗಿವೆ. ಯೂರೋಪ್, ಆಫ್ರಿಕಾ, ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡ ‘ಫ್ರೆಂಚ್ ವಿದೇಶಿ ಪಡೆ’ 75ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಿದೆ. 2023ರಲ್ಲಿ ಪ್ಯಾರಿಸ್ ಬ್ಯಾಸ್ಟಿಲ್ ಡೇನಲ್ಲಿ ಭಾರತ ಸೇನೆ ಪಾಲ್ಗೊಂಡಿತ್ತು, ಹೀಗಾಗಿ ಇಂದು ಫ್ರೆಂಚ್ ವಿದೇಶಿ ಪಡೆ ಪಥಸಂಚಲನದಲ್ಲಿ ಭಾಗಿಯಾಗಿದೆ. ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್ ಸೇನಾ ಬ್ಯಾಂಡ್ ಭಾಗಿಯಾಗಿದೆ. 30 ಮಂದಿ ಸಂಗೀತಗಾರರಿಂದ ತಮ್ಮ ರೆಜಿಮೆಂಟ್ ಗೀತೆ ಗಾಯನ ನುಡಿಸಲಾಯಿತು.
ಇದೇ ಮೊದಲ ಬಾರಿಗೆ ಕರ್ತವ್ಯ ಪಥದಲ್ಲಿ ‘ಆವಾಹನ’ ಪ್ರದರ್ಶನ. ದೇಶದ ವಿವಿಧ ಜಾನಪದ ಸಂಗೀತದ ಸಂಸ್ಕೃತಿ ಸಾರುವ ‘ಆವಾಹನ’ 112 ಮಹಿಳಾ ಕಲಾವಿದರಿಂದ ಜಾನಪದ, ಬುಡಕಟ್ಟು ವಾದ್ಯ ಪ್ರದರ್ಶನ. 30 ಕಲಾವಿದರಿಂದ ಕರ್ನಾಟಕದ ‘ಡೊಳ್ಳು ಕುಣಿತ’ ಪ್ರದರ್ಶನ. 20 ಕಲಾವಿದರಿಂದ ಡೋಲು, ಮಹಾರಾಷ್ಟ್ರದ ‘ಟಶಾ’ ಡೋಲು ವಾದನ. 16 ಜನರಿಂದ ತೆಲಂಗಾಣದ ಡಪ್ಪು ವಾದನ, 4ಜನರಿಂದ ನಾದಸ್ವರ. 16 ಕಲಾವಿದರಿಂದ ಪಶ್ಚಿಮ ಬಂಗಾಳದ ಧಕ್ ಮತ್ತು ಡೋಲು ವಾದನ. 8 ಮಂದಿ ಪಶ್ಚಿಮ ಬಂಗಾಳದ ಕಲಾವಿದರಿಂದ ಮೊಳಗಿದ ಶಂಖನಾದ. 4 ಕಲಾವಿದರಿಂದ ತುತ್ತೂರಿ ಮತ್ತು ಕಂಸಾಳೆ ಪ್ರದರ್ಶನ ಮಾಡಲಾಯಿತು..