Wednesday, November 5, 2025
Flats for sale
Homeರಾಜ್ಯರಾಮನಗರ : ರಾಮನಗರದಲ್ಲಿ ರಾಮಮಂದಿರ ಕಟ್ಟಲು ಮುಂದಾದ ಕೈ ನಾಯಕರು.

ರಾಮನಗರ : ರಾಮನಗರದಲ್ಲಿ ರಾಮಮಂದಿರ ಕಟ್ಟಲು ಮುಂದಾದ ಕೈ ನಾಯಕರು.

ರಾಮನಗರ : ಕಾಂಗ್ರೆಸ್ ನಾಯಕರಿಗೆ ದೇಶದಲ್ಲಿ ರಾಮಮಂದಿರ ನಿರ್ಮಾಣಮಾಡುವುದರಿಂದ ತಲೆನೋವು ಉಂಟಾಗಿದ್ದು ಹಿಂದೂಗಳ ಮತಗಳನ್ನು ಕ್ರೂಡೀಕರಿಸಲು ಇನ್ನಿಲ್ಲದ ತಂತ್ರ ಕುತಂತ್ರಗಳನ್ನು ಮಾಡುತ್ತ ಇದ್ದಾರೆ ಎಂಬ ನಿಜ,ಒಂದು ಕಡೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ರಾಮನಗರದಲ್ಲಿ ರಾಮಮಂದಿರ ಕಟ್ಟುವ ಪ್ರತಿಷ್ಠೆಗೆ ಕೈ ನಾಯಕರು ಮುಂದಾಗಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಶಾಸಕ‌‌ ಬಾಲಕೃಷ್ಣ ರಾಮ ಬಿಜೆಪಿ ಸ್ವತ್ತಲ್ಲ, ಸಮಾಜದ ಸ್ವತ್ತು ಎಂದು ಹೇಳಿದ ಅವರು ಬೃಹತ್ ಮಂದಿರ ಕಟ್ಟುತ್ತೇವೆ ಅಂತ ಗುಡುಗಿದ್ದಾರೆ. ರಾಮಸೇತು ಹಾಗೂ ರಾಮಮಂದಿರವನ್ನು ಪ್ರಶ್ನಿಸಿದ ಕಾಂಗ್ರೆಸ್ ಗೆ ಇದೀಗ ಹಿಂದೂಗಳ ಮತಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವುದಂತೂ ನಿಜ.

ಇಡೀ ದೇಶದ ಹಿಂದೂಗಳು ರಾಮನಿಗೆ ಶರಣಾಗಿದ್ದು ಇದೊಂದು ಐತಿಹಾಸಿಕ ದಿನವೆಂದು ಜನರು ಮಾತನಾಡುತ್ತಿದ್ದಾರೆ.ಅಯೋಧ್ಯೆಯ ರಾಮಮಂದಿರ‌ದಲ್ಲಿ ಪ್ರಾಣ‌ ಪ್ರತಿಷ್ಠಾಪನೆ ದಿನ‌ ಹತ್ತಿರ ಆಗುತ್ತಿದ್ದಂತೆ ಎಲ್ಲೆಡೆ ಸಂಭ್ರಮದ‌ ವಾತಾವರಣ ನಿರ್ಮಾಣ ಆಗ್ತಿದೆ.ಅದರಲ್ಲೂ ರೇಷ್ಮೆ ನಗರಿ ರಾಮನಗರದಲ್ಲಿ ಬೃಹತ್ ರಾಮಮಂದಿರ‌ ಕಟ್ಟುವ ಚರ್ಚೆ ಬಿರುಸಾಗಿಯೇ ನಡೆಯುತ್ತಿದೆ.‌ ರಾಮನಗರದಲ್ಲಿ ರಾಮೋತ್ಸವ ಮಾಡುತ್ತೇವೆ ಅಂತ ಶಾಸಕ ಇಕ್ಬಾಲ್ ಹುಸೇನ್ ಹೇಳಿದರೆ, ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ, ರಾಮನಗರಲ್ಲಿ ಬೃಹತ್ ರಾಮಮಂದಿರ ಕಟ್ಟಿ ಅದ್ದೂರಿಯಾಗಿ ಉದ್ಘಾಟನೆ ಮಾಡುತ್ತೇವೆ ಅಂತ ಹೇಳಿದ್ದಾರೆ.ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡು ನಿಲುವಿಗೆ ಬದ್ಧರಾಗಿರುವ ಸ್ಥಳೀಯ ನಾಯಕರು ಅಯೋಧ್ಯೆ ತೆರಳದೇ ಇರಲು ನಿಶ್ಚಯ ಮಾಡಿದ್ದಾರೆ ಆದರೆ ಇದೇ ವಿಚಾರ ಹಿಂದೂ ಸಮುದಾಯದವರಿಗೆ ಬೇರೆಯದ್ದೆ ಸಂದೇಶ ರವಾನಿಸಬಾರ್ದು ಅಂತ ರಾಮನಗರದಲ್ಲೇ ಬೃಹತ್ ರಾಮಮಂದಿರ ಕಟ್ಟುವ ಯೋಚನೆ‌ಮಾಡಿದ್ದಾರೆ.‌

ಸಂಸದ ಡಿ ಕೆ ಸುರೇಶ್ ಬೃಹತ್ ರಾಮಮಂದಿರ ನಿರ್ಮಾಣಕ್ಕಗಿ ಬೇಕಾಗುವ ಹತ್ತಾರು ಎಕರೆ ಭೂಮಿ ಹುಡುಕಾಟಕ್ಕೆ ಮುಂದಾಗಿದ್ದಾರೆ,‌ ಐತಿಹಾಸಿಕ ಪವಿತ್ರ ಸ್ಥಳ ರಾಮದೇವರಬೆಟ್ಟದಲ್ಲಿರುವ ರಾಮಮಂದಿರ ಅಭಿವೃದ್ಧಿ ಪಡಿಸಬೇಕು, ಹಾಗೂ ಬಹುದೊಡ್ಡ ಪ್ರದೇಶದಲ್ಲಿ ರಾಮಮಂದಿರ ಕಟ್ಟಬೇಕು ಪ್ರಯತ್ನ ಪಡುತ್ತಿದ್ದಾರೆ ಆದರೆ ಇದು ಎಷ್ಟರ ಮಟ್ಟಿಗೆ ಫಲಿಸುತ್ತೆ ಅಂತ ಮುಂದೆ ಕಾದುನೋಡಬೇಕಾಗಿದೆ.

ರಾಮದೇವರ ಬೆಟ್ಟದಲ್ಲಿ ರಾಮೋತ್ಸವ ಮಾಡಬೇಕು ಅಂತ ಸ್ಥಳೀಯ ಶಾಸಕ‌ ಇಕ್ಬಾಲ್ ಹುಸೇನ್ ಪ್ಲ್ಯಾನ್ ಮಾಡುವ ಜೊತೆಗೆ ಇನ್ನೊಂದು ಹೆಜ್ಜೆ ಮುಂದು ಹೋಗಿ ಬೃಹತ್ ಮಟ್ಟದ ರಾಮಮಂದರಿ ನಿರ್ಮಾಣ‌ ಮಾಡೋ ವಿಚಾರ ಈಗ ಮುನ್ನೆಲೆಗೆ ಬಂದಿದೆ. ರಾಮದೇವರ ಬೆಟ್ಟ ರಿಸರ್ವ್ ಫಾರೆಸ್ಟ್ ವ್ಯಾಪ್ತಿಗೆ ಬರುವ ಹಿನ್ನೆಲೆ ಪಟ್ಟಣದ ಅಕ್ಕಪಕ್ಕದಲ್ಲೇ ಇಪ್ಪತ್ತು ಎಕರೆ ಜಾಗ ನೋಡಿ ಮಂದಿರ ಕಟ್ಟುಸುತ್ತೇವೆ ಅಂತ ಕೈ ನಾಯಕರು ಉತ್ತರ ಪ್ರದೇಶದ ರಾಮಸಂದಿರಕ್ಕೆ ಸಡ್ಡು ಹೊಡೆಯಲು ರಾಮನಗರದಲ್ಲಿ ಕಾಂಗ್ರೆಸ್ ರಾಮ ಮಂದಿರ ಕಟ್ಟಲು ಹೊರಟಿರುವುದೇ ದೊಡ್ಡ ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular