ಬೆಂಗಳೂರು : ಈ ಸಲ ಅಂತೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅತಿಹೆಚ್ಚು ಸ್ಥಾನ ಗಳಿಸಲು ಇಲ್ಲಸಲ್ಲದ ಕಸರತ್ತು ನಡೆಸಿತ್ತಿದ್ದು ಮಲ್ಲಿಕಾರ್ಜುನ ಖರ್ಗೆ ಯವರ ಪ್ರತಿಸ್ಥೆಯ ಪ್ರಶ್ನೆ ಕೂಡ ಆಗಿದೆ.
ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸುರ್ಜೇವಾಲಾ ೨ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಲು ಏನೆಲ್ಲ ಪ್ರಯತ್ನ ಮಾಡಬೇಕೆಂಬುದರ ಬಗ್ಗೆ ದೀರ್ಘವಾದ ಯೋಜನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ., ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಇದರಲ್ಲಿ ಸಚಿವರ ಪಾತ್ರ ಕೂಡಾ ಮಹತ್ವದ್ದು. ಹಾಗಾಗಿ ಪಕ್ಷಕ್ಕೆ ಸೋಲಾದರೆ ಸಚಿವರ ತಲೆದಂಡ ಅನಿವಾರ್ಯ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದೆ.
ಇದರ ಬೆನ್ನಲ್ಲೇ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರು ಇನ್ನೆರಡು ದಿನಗಳಲ್ಲಿ ಮತ್ತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ಚುನಾವಣೆ ತಂತ್ರಗಾರಿಗೆ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯ ದೆಹಲಿ ಸಂಯೋಜಕರ ಸಭೆ ಕರ್ನಾಟಕದಲ್ಲಿನ ಕಾಂಗ್ರೆಸ್ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮಹತ್ವದ ಸಮಾಲೋಚನೆ ನಡೆಸಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಅಥವಾ ಹಾಲಿ ಸಚಿವರ ಸ್ಪರ್ಧೆ ವಿಚಾರವಾಗಿ ಈ ಸಭೆಯಲ್ಲಿ ಪ್ರಸ್ತಾಪವಾಗದಿದ್ದರೂ ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎನ್ನುವ ಸ್ಪಷ್ಟ ಸೂಚನೆ ನೀಡಲಾಗಿದೆ.
ಅಷ್ಟೇ ಅಲ್ಲದೆ ಗೆಲ್ಲುವ ಕ್ಷೇತ್ರದಲ್ಲಿ ಸೋತರೆ ಸರಿಯಾಗಿ ಕೆಲಸ ಮಾಡದೆ ಸೋತರೆ ಅದನ್ನು ವೈಫಲ್ಯ ಎಂದೇ ತಿಳಿದುಕೊಳ್ಳಬೇಕಾಗುತ್ತದೆ. ಅದು ಸಚಿವರ ತಲೆದಂಡವೂ ಆಗಬಹುದು ಎಂಬ ಗAಭೀರ ಎಚ್ಚರಿಕೆ ವರಿಷ್ಠರಿಂದ ರವಾನೆಯಾಗಿದೆ.
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಸೇರಿದಂತೆ ಪಕ್ಷ ಅಥವಾ ಸರ್ಕಾರದಲ್ಲಿ ಗೊಂದಲ ಹುಟ್ಟುಹಾಕುವ ಯಾವುದೇ ಹೇಳಿಕೆ ಇಲ್ಲವೇ ಸಚಿವರ ಪ್ರತ್ಯೇಕ ಸಭೆ ಬೇಡ ಎನ್ನುವ ಮೂಲಕ ಇತ್ತೀಚೆಗೆ ಡಿನ್ನರ್ ಪಾರ್ಟಿ ಹೆಸರಲ್ಲಿ ನಡೆದಿದ್ದ ಮಾತುಕತೆ ಸಭೆಗೂ ಕಡಿವಾಣ ಹಾಕಲು ಹೈಕಮಾಂಡ್ ಮುಂದಾಗಿದೆ.
ಇನ್ನೆರಡು ದಿನಗಳಲ್ಲಿ ಖುದ್ದು ಸುರ್ಜೇವಾಲಾ ಅವರೇ ಮತ್ತೆ ರಾಜ್ಯಕ್ಕೆ ಬರಲಿದ್ದು ಇನ್ಯಾವ ಸಂದೇಶ ಹೊತ್ತು ತರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.


