Thursday, November 6, 2025
Flats for sale
Homeದೇಶಹೊಸದಿಲ್ಲಿ : ರಾಮಜನ್ಮಭೂಮಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿ ಪ್ರಾಣತ್ಯಾಗ ಮಾಡಿದ ಕೊಠಾರಿ ಸಹೋದರರ ಕುಟುಂಬಕ್ಕೆ ಆಮಂತ್ರಣ,ಭಾವುಕರಾದ...

ಹೊಸದಿಲ್ಲಿ : ರಾಮಜನ್ಮಭೂಮಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿ ಪ್ರಾಣತ್ಯಾಗ ಮಾಡಿದ ಕೊಠಾರಿ ಸಹೋದರರ ಕುಟುಂಬಕ್ಕೆ ಆಮಂತ್ರಣ,ಭಾವುಕರಾದ ಸಹೋದರಿ.

ಹೊಸದಿಲ್ಲಿ: ರಾಮಮಂದಿರ ಆಂದೋಲನದ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಕೊಠಾರಿ ಸಹೋದರರ ಸಂಬಂಧಿಕರನ್ನು ಅಯೋಧ್ಯೆಯಲ್ಲಿ ‘ಭೂಮಿ ಪೂಜೆ’ಗೆ ಆಹ್ವಾನಿಸಲಾಗಿತ್ತು, ಅಯೋಧ್ಯೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಕರ ಸೇವಕರಲ್ಲಿ ರಾಮ್ ಕುಮಾರ್ ಕೊಠಾರಿ ಮತ್ತು ಅವರ ಸಹೋದರ ಶರದ್ ಕುಮಾರ್ ಸೇರಿದ್ದರು ಕೊಠಾರಿ ಕುಟುಂಬದ ಇಬ್ಬರು ಸದಸ್ಯರು ಇಬ್ಬರೂ ಕರಸೇವಕರು ಹುಟ್ಟಿದ ಮಣ್ಣನ್ನು ಸಂಗ್ರಹಿಸಿ ಟ್ರಸ್ಟ್‌ಗೆ ನೀಡಿದ್ದು ಭೂಮಿಪೂಜೆಗಾಗಿ ಆಹ್ವಾನಿಸಲಾದ 175 ಗಣ್ಯ ಅತಿಥಿಗಳಲ್ಲಿ ಪ್ರಧಾನಿ ಮೋದಿ ಸೇರಿದ್ದರು.

ಈಗ ರಾಮಜನ್ಮಭೂಮಿ ಉದ್ಘಾಟನೆಯ ಸಮಯ ಕಳೆದ 30 ವರ್ಷಗಳಲ್ಲಿ ರಾಮಜನ್ಮಭೂಮಿ ಹೋರಾಟದ ವೇಳೆ ನಡೆದ ಗೋಲಿಬಾರ್ ನಲ್ಲಿ ಮಡಿದ ಇಬ್ಬರು ಕರಸೇವಕ ಸಹೋದರರಾದ ರಾಮ್ ಮತ್ತು ಶರದ್ ಕೊಠಾರಿ ಕುಟುಂಬಕ್ಕೆ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಆಹ್ವಾನ ಪತ್ರಿಕೆ ನೀಡಲಾಗಿದ್ದು ಅವರ ಕುಟುಂಬಸ್ಥರು ಬಾಹುಕರಾಗಿದ್ದಾರೆ. ಇವರಿಬ್ಬರ ಸಹೋದರಿ ಪೂರ್ಣಿಮಾ ಕೊಠಾರಿ ಅವರು ಆಹ್ವಾನವನ್ನು ಸ್ವೀಕರಿಸಿದ ಬಳಿಕ ಭಾವುಕರಾದರು.ಇದು ಕಳೆದ ಸುಮಾರು ವರುಷಗಳಿಂದ ಹಿಂದುತ್ವಗಾಗಿ ಹಾಗೂ ರಾಮಜನ್ಮಭೂಮಿಗಾಗಿ ಪ್ರಾಣ ತೆತ್ತವರಿಗೂ ಜನವರಿ 22 ರಂದು ಸಲ್ಲುವ ಗೌರವ ಎಂದು ಹಿಂದೂ ಮುಖಂಡರು ಹೇಳಿದ್ದಾರೆ.

ಕೊಠಾರಿ ಕುಟುಂಬವು ಟ್ರಸ್ಟ್‌ನಿಂದ ಆಹ್ವಾನವನ್ನು ಪಡೆಯುವಲ್ಲಿ ಸಂಭ್ರಮದಲ್ಲಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 5 ರಂದು ಲಾಕ್‌ಡೌನ್ ಘೋಷಿಸಿತ್ತು ,ಇಲ್ಲಿ ನೋಡುವುದಾದರೆ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಪಕ್ಷಗಳಿಗೆ ಈ ಉದ್ಘಾಟನೆಯಲ್ಲಿ ಭಾಗವಿಸುವ ಯೋಗ್ಯತೆನೆ ಇರಬಾರದೆಂಬುದು ಕೊಠಾರಿ ಕುಟುಂಬದ ಸದಸ್ಯರ ಮಾತು.

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಕೊಠಾರಿ ಕುಟುಂಬಕ್ಕೆ ಆಹ್ವಾನ ಪತ್ರಿಕೆ ನೀಡಲಾಗಿದ್ದು ಅವರ ಕುಟುಂಬಸ್ಥರು ಬಾಹುಕರಾಗಿದ್ದಾರೆ. ಇವರಿಬ್ಬರ ಸಹೋದರಿ ಪೂರ್ಣಿಮಾ ಕೊಠಾರಿ ಅವರು ಆಹ್ವಾನವನ್ನು ಸ್ವೀಕರಿಸಿದ ಬಳಿಕ ಭಾವುಕರಾದರು.ಈ ಸಮಯದಲ್ಲಿ ಸಹೋದರರು ಇರುತ್ತಿದ್ದರೆ ಸಂತೋಷ ಪಡುತ್ತಿದ್ದರು ಎಂಬುದು ಅವರ ಮಾತು.

1990ರಲ್ಲಿ ಎಸ್‌ಪಿ ಆಳ್ವಿಕೆಯಲ್ಲಿ ಎರಡು ದಿನಗಳ ಕಾಲ ನಡೆದ ಪೊಲೀಸ್ ಫೈರಿಂಗ್‌ನಲ್ಲಿ ಅವರು ಪ್ರಾಣ ತ್ಯಾಗ ಮಾಡಿದ್ದರು.ಅಯೋಧ್ಯೆ ಹೋರಾಟದಲ್ಲಿ ಕೊಠಾರಿ ಬ್ರದರ್ಸ್ ಎಂದೇ ಖ್ಯಾತರಾಗಿರುವ ಕೋಲ್ಕತಾ ಮೂಲದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ ಸಹೋದರರು. ಮುಲಾಯಂ ಸಿಂಗ್ ನ ಆದೇಶದಿಂದ ಅಮೂಲ್ಯ ರತ್ನಗಳನ್ನು ಕಳೆದುಕೊಂಡಿದ್ದೇವೆ ಎಂದು ಸಹೋದರಿ ತಿಳಿಸಿದ್ದಾರೆ,ಇದಾಗ 34 ವರ್ಷಗಳ ಬಳಿಕ ಇದೀಗ ರಾಮಮಂದಿರ ನಿರ್ಮಾಣಗೊಂಡು ಉದ್ಘಾಟನೆಯಾಗುತ್ತಿರುವ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ರಾಮಜನ್ಮಭೂಮಿ ಟ್ರಸ್ಟ್ ನೆನಪಿಸಿಕೊಂಡು ಆಹ್ವಾನ ಪತ್ರಿಕೆ ನೀಡಿರುವುದಕ್ಕೆ ಅವರ ಸಹೋದರಿ ಪೂರ್ಣಿಮಾ ಕೊಠಾರಿ ಭಾವುಕರಾಗಿದ್ದಾರೆ. ತಮ್ಮ ಸಹೋದರರ ಫೋಟೋಗಳ ಮುಂದೆ ಆಹ್ವಾನ ಪತ್ರಿಕೆಯನ್ನು ಹಿಡಿದು ನಿಂತ ಸಂತಸ ವ್ಯಕ್ತಪಡಿಸಿದ ಅವರು, ಸಮಾರಂಭದಲ್ಲಿ ಭಾಗವಹಿಸಲಿರುವುದಾಗಿ ತಿಳಿಸಿದ್ದಾರೆ.

ಯಾರು ಈ ಕೊಠಾರಿ ಬ್ರದರ್ಸ್?

1990ರಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಹೋರಾಟ ತೀವ್ರವಾದಾಗ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಮತ್ತು ಶಿವ ಸೇನೆ ಅಯೋಧ್ಯೆಗೆ ರ‍್ಯಾಲಿ ನಡೆಸಲು ನಿರ್ಧರಿಸಿತು. ಇದಕ್ಕೆ ಕರ ಸೇವೆ ಎಂದು ಹೆಸರಿಡಲಾಗಿತ್ತು.

ಹೋರಾಟ ತೀವ್ರವಾಗುತ್ತಿರುವುದನ್ನು ಮನಗಂಡ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಅಯೋಧ್ಯೆಗೆ ಕರಸೇವಕರ ಎಂಟ್ರಿಯನ್ನು ನಿಷೇಧಿಸಿದರು. ಅಯೋಧ್ಯೆ ನಗರ ಪ್ರವೇಶಿಸುವ ಗಡಿಗಳಲ್ಲಿ ಸರ್ಪಗಾವಲು ಹಾಕಲಾಗಿತ್ತು. ಅಯೋಧ್ಯೆಯಲ್ಲಿ ಒಂದು ಹಕ್ಕಿಯೂ ಹಾರುವಂತಿಲ್ಲ ಎಂದು ಸ್ವತಃ ಮುಲಾಯಂ ಸಿಂಗ್ ಅವರೇ ಘೋಷಿಸಿದ್ದರು.

ಶರದ್ ಕೊಠಾರಿಗೆ 22 ವರ್ಷವಾದರೆ, ರಾಮ ಕೊಠಾರಿಗೆ ಇನ್ನೂ 20 ವರ್ಷವಷ್ಟೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಇಬ್ಬರು ಸಹೋದರರು ಪ್ರತಿದಿನ ಮನೆ ಹತ್ತಿರ ನಡೆಯುತ್ತಿದ್ದ ಶಾಖೆಯಲ್ಲಿ ಭಾಗವಹಿಸುತ್ತಿದ್ದರು.ಕೋಲ್ಕತಾದಲ್ಲಿ ರಾಜಸ್ಥಾನದ ಮಾರ್ವಾಡಿ ವ್ಯಾಪಾರಸ್ಥರ ಕೇಂದ್ರವಾದ ಬಾರಾ ಬಜಾರ್ ಪ್ರದೇಶದ ನಿವಾಸಿಗಳು ಈ ಕೊಠಾರಿ ಸಹೋದರರು.

ಈ ಕರಸೇವೆಯಲ್ಲಿ ಭಾಗವಹಿಸಲು ಅಕ್ಟೋಬರ್ 22ರಂದು ಕೋಲ್ಕತಾದಿಂದ 70 ಮಂದಿ ತೆರಳಿದ್ದರು. ಅವರ ಜೊತೆ ಕೊಠಾರಿ ಸಹೋದರರೂ ಇದ್ದರು. ಅವರು ವಾರಣಾಸಿ ಮೂಲಕ ಅಯೋಧ್ಯೆ ತಲುಪಬೇಕಾಗಿತ್ತು. ಆದರೆ ವಾರಣಾಸಿ ತಲುಪಿದಾಗಲೇ ಅವರ ರೈಲು ಏಕಾಏಕಿ ರದ್ದಾಗಿರುವ ವಿಚಾರ ಅವರಿಗೆ ತಿಳಿದದ್ದು. ಹೀಗಾಗಿ ಅವರು ಖಾಸಗಿ ವಾಹನ ಹಿಡಿದು ಅಯೋಧ್ಯೆಗೆ ಹೊರಟರು.

ಒಂದು ವಾರ ಪಾದಯಾತ್ರೆ ನಡೆಸಿದರು

ಅವರಿನ್ನೂ 250 ಕಿಮೀ ದೂರವಿತ್ತು. ಅಂದು ರಾತ್ರಿ ರಾಯ್ ಬರೇಲಿ ಸಮೀಪದ ಲಾಲ್ ಗಂಜ್ ನಲ್ಲಿ ಆರೆಸ್ಸೆಸ್ ಅವರಿಗಾಗಿ ವಸತಿ ವ್ಯವಸ್ಥೆ ಮಾಡಿತ್ತು. ಅಲ್ಲಿಗೆ ತಲುಪಿದಾಗ ಅಯೋಧ್ಯೆಗೆ ತೆರಳುವ ಎಲ್ಲಾ ರಸ್ತೆ ಮಾರ್ಗಗಳನ್ನೂ ಸರ್ಕಾರ ಬಂದ್ ಮಾಡಿದೆ ಎಂಬ ವಿಚಾರ ತಿಳಿದು ಬಂದಿದ್ದು. ಹೀಗಾಗಿ ಕಾಲ್ನಡಿಗೆಯ ಆಯ್ಕೆಯೊಂದೇ ಅವರ ಮುಂದಿದ್ದುದು. ಪೊಲೀಸ್ ಪಹರೆ ಇದ್ದುದರಿಂದ ಅವರು ಮುಖ್ಯರಸ್ತೆಯನ್ನು ಬಳಸುವಂತಿರಲಿಲ್ಲ.

ಅಲ್ಲಲ್ಲಿ ತಂಗಿ ಒಂದು ವಾರದ ಪಾದಯಾತ್ರೆ ಮಾಡಿದ ತಂಡ ಸೆಪ್ಟೆಂಬರ್ 30ರಂದು ಅಯೋಧ್ಯೆ ತಲುಪಿತ್ತು. ಪೂರ್ವನಿಗದಿಯಂತೆ ಅಕ್ಟೋಬರ್ 2ರ ಕಾರ್ತಿಕ ಪೂರ್ಣಿಮೆಯಂದು ರಾಮಭಜನೆಯನ್ನು ಹಾಡುತ್ತಾ ಕರಸೇವಕರು ರಾಮಮಂದಿರದತ್ತ ಹೊರಟಿದ್ದರು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಈ ಇಬ್ಬರು ಸಹೋದರರ ದೇಹವನ್ನು ಸೀಳಿತ್ತು.

ಈ ಘಟನೆಯನ್ನು ನೆನೆದು ಆ ಇಬ್ಬರು ಕರಸೇವಕರ ಏಕೈಕ ಸಹೋದರಿ ಪೂರ್ಣಿಮಾ ಕೊಠಾರಿ ಈಗಲೂ ಕಣ್ಣೀರಿಡುತ್ತಾರೆ. ಇದೀಗ ಆಹ್ವಾನ ಪತ್ರಿಕೆ ಲಭಿಸಿದ್ದರಿಂದ ಆನಂದ ಭಾಷ್ಪ ಸುರಿಸಿದ್ದಾರೆ.

ರಾಮಮಂದಿರ ಆಂದೋಲನದ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಕೊಠಾರಿ ಸಹೋದರರ ಸಂಬಂಧಿಕರನ್ನು ಅಯೋಧ್ಯೆಯಲ್ಲಿ ‘ಭೂಮಿ ಪೂಜೆ’ಗೆ ಆಹ್ವಾನಿಸಲಾಗಿತ್ತು, ಅಯೋಧ್ಯೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಕರ ಸೇವಕರಲ್ಲಿ ರಾಮ್ ಕುಮಾರ್ ಕೊಠಾರಿ ಮತ್ತು ಅವರ ಸಹೋದರ ಶರದ್ ಕುಮಾರ್ ಸೇರಿದ್ದಾರೆ. ಕೊಠಾರಿ ಕುಟುಂಬದ ಇಬ್ಬರು ಸದಸ್ಯರು ಇಬ್ಬರೂ ಕರಸೇವಕರು ಹುಟ್ಟಿದ ಮಣ್ಣನ್ನು ಸಂಗ್ರಹಿಸಿ ಟ್ರಸ್ಟ್‌ಗೆ ನೀಡಿದ್ದು ಭೂಮಿಪೂಜೆಗಾಗಿ ಆಹ್ವಾನಿಸಲಾದ 175 ಗಣ್ಯ ಅತಿಥಿಗಳಲ್ಲಿ ಪ್ರಧಾನಿ ಮೋದಿ ಸೇರಿದ್ದರು ,

RELATED ARTICLES

LEAVE A REPLY

Please enter your comment!
Please enter your name here

Most Popular