Thursday, November 6, 2025
Flats for sale
Homeರಾಜ್ಯಹೊಸನಗರ ; ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು - ಪತಿಯ ಸಾವಿನ ಸುದ್ದಿ ತಿಳಿಯುತಿದ್ದಂತೆ ಪತ್ನಿಯೂ...

ಹೊಸನಗರ ; ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು – ಪತಿಯ ಸಾವಿನ ಸುದ್ದಿ ತಿಳಿಯುತಿದ್ದಂತೆ ಪತ್ನಿಯೂ ನಿಧನ.

ಹೊಸನಗರ : ತುಂಬು ಜೀವನ ನಡೆಸಿದ ಸತಿ-ಪತಿಗಳಿಬ್ಬರು ಸಾವಿನಲ್ಲೂ ಒಂದಾಗಿರುವ ಚಿತ್ರಣವೊಂದು ಹೊಸನಗರದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದ ಹೊಳೆಯಪ್ಪ (90) ಹಾಗೂ ಗಂಗಮ್ಮ(80) ಇವರಿಬ್ಬರೂ ಸಾವಿನಲ್ಲಿ ಒಂದಾದ ದಂಪತಿಗಳಾಗಿದ್ದಾರೆ.

ಸಾವಂತೂರು ಗ್ರಾಮ ಸಾಲತೋಡೆಯ ಕೃಷಿ ಕಾರ್ಮಿಕ ದಂಪತಿಗಳಾದ 90 ವರ್ಷದ ಹೊಳೆಯಪ್ಪ ಹಾಗೂ 80 ರ ಗಂಗಮ್ಮ ದಂಪತಿಗಳು ಗುರುವಾರ ಬೆಳಗಿನ ಜಾವ ಒಂದು ಗಂಟೆಯ ಅಂತರದಲ್ಲಿ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ.

ಪತಿ ಹೊಳೆಯಪ್ಪನವರು ಅನಾರೋಗ್ಯದಿಂದ ಮೃತಪಟ್ಟ ವಿಷಯ ತಿಳಿಯುತಿದ್ದಂತೆ ಪತ್ನಿ ಗಂಗಮ್ಮ ತೀವ್ರ ಹೃದಯಘಾತದಿಂದ ಗಂಡನೊಂದಿಗೆ ಇಹಲೋಕ ತ್ಯಜಿಸಿದ್ದಾರೆ .

ಮೃತ ದಂಪತಿಗಳು ಇಬ್ಬರು ಗಂಡು ಗಂಡು ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.

ಮೃತ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular