Thursday, March 12, 2026
Flats for sale
Homeವಿದೇಶಕಾಸರಗೋಡು : ಬೀಡಿ ಕಟ್ಟುತಿದ್ದ ಸುರೇಂದ್ರನ್.ಕೆ ಪಟ್ಟಿಲ್ ಈಗ ಅಮೇರಿಕಾದಲ್ಲಿ ನ್ಯಾಯಾಧೀಶ.

ಕಾಸರಗೋಡು : ಬೀಡಿ ಕಟ್ಟುತಿದ್ದ ಸುರೇಂದ್ರನ್.ಕೆ ಪಟ್ಟಿಲ್ ಈಗ ಅಮೇರಿಕಾದಲ್ಲಿ ನ್ಯಾಯಾಧೀಶ.

ಕಾಸರಗೋಡು : ಕೆಳೆದ 30 ವರ್ಷಗಳ ಹಿಂದಿನ ಕತೆಗಳು ಅಂತೂ ಕೇಳಿದರೆ ಕಣ್ಣಂಚಿನಲ್ಲಿ ನೀರು ತುಂಬಿ ಬರುತ್ತೆ ಯಾಕೆಂದರೆ ಆ ಸಮಯ ಒಪ್ಪೊತ್ತು ಊಟಕ್ಕೂ ಇಲ್ಲದ ಸಮಯ,ಆದರೂ ಛಲ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಉದಾಹರಣೆ ಈ ಸುರೇಂದ್ರನ್ ರವರ ಜೀವನ ಶೈಲಿಯಲ್ಲಿ ತಿಳಿಯಬಹುದು.

ಆರ್ಥಿಕ ಸಮಸ್ಯೆಯಿಂದ ಎಳೆ ವಯಸ್ಸಿನಲ್ಲಿ ವಿದ್ಯಾಭ್ಯಾಸ ತೊರೆದು ಬೀಡಿ ಕಟ್ಟುವ ಕೆಲಸ ಮಾಡುತಿದ್ದ ಕಾಸರಗೋಡಿನ ಸುರೇಂದ್ರನ್ ಕೆ ಪಟ್ಟಿಲ್ ಇದೀಗ ಅಮೇರಿಕಾ ಟೆಕ್ಸಾಸ್ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಆರ್ಥಿಕವಾಗಿ ಕಡು ಬಡತನದ ಕುಟುಂಬದಲ್ಲಿ ಸುರೇಂದ್ರನ್ ಕೆ ರವರು ಬೆಳೆದುಬಂದಿದ್ದು ಹಣಕ್ಕಾಗಿ ವಿಧ್ಯಾಭ್ಯಾಸವನ್ನು ತೊರೆದು ಬೀಡಿ ಕಟ್ಟುವುದು ಹಾಗೂ ಇನ್ನಿತರ ದಿನಕೂಲಿ ಕೆಲಸ ಮಾಡುತಿದ್ದರು.ಹೀಗೆ ೧೦ನೆ ತರಗತಿಯಲ್ಲಿ ವಿದ್ಯಾಭ್ಯಾಸ ತೊರೆದು ಹೊಟ್ಟೆಪಾಡಿಗಾಗಿ ಮಾಡುತಿದ್ದ ದಿನಗೂಲಿ ಕೆಲಸಗಳು ಜೀವನದ ಬಗ್ಗೆ ದೃಷ್ಠಿಕೋನವನ್ನೇ ಬದಲಿಸಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.

ತಮ್ಮ ಗ್ರಾಮದಲ್ಲಿರುವ ಹಲವಾರು ವ್ಯಕ್ತಿಗಳ ಆರ್ಥಿಕ ಸಹಾಯದಿಂದ ಎಲ್.ಎಲ್.ಬಿ ಶಿಕ್ಷಣ ಪೂರೈಸಿ ಅಮೆರಿಕಕ್ಕೆ ತೆರಳಿದ್ದರು,ಅಲ್ಲೂ ಅವರ ಬಗ್ಗೆ ನಕಾರಾತ್ಮಕ ಪ್ರಚಾರ ನಡೆದಿತ್ತು,ಉಚ್ಚಾರಣೆಯ ಬಗ್ಗೆ ಜನರು ಅಪಹಾಸ್ಯೆ ಮಾಡುತ್ತಿದ್ದು ಅವರ ಆ ಸ್ಥಾನಕ್ಕೆ ಸ್ಪರ್ಧಿಸುವ ವೇಳೆ ಸ್ವತಃ ಅವರಿಗೆ ಅವರ ಮೇಲೆ ನಂಬಿಕೆ ಇರಲಿಲ್ಲ ಎಂದು ತಿಳಿಸಿದ್ದಾರೆ.ಆದರೆ ಆತ್ಮ ವಿಶ್ವಾಸ ,ಕಠೀಣ ಶ್ರಮದಿಂದ ಈ ಸ್ಥಾನಕ್ಕೇರಿದೆನೆಂದು ಸುರೇಂದ್ರನ್ ರವರು ತಮ್ಮ ಹಳೆಯ ನೆನಪನ್ನು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular