ನವದೆಹಲಿ: ರಾಮಭಕ್ತರ ತಂಟೆಗೆ ಬರಬೇಡಿ, ಅಂತಹ ಪ್ರಮಾದ ಮಾಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ನಿಮ್ಮ ಫಲಿತಾಂಶ ಶೂನ್ಯ ಮಾಡುತ್ತಾರೆ.ಹೀಗೆಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
೧೯೯೨ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಉಂಟಾದ ಕೋಮುಗಲಭೆಗಳಲ್ಲಿ ಶಾಮೀಲಾದವರ ಬಂಧಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಕೇಂದ್ರ ಸಚಿವರು ಮೇಲಿನಂತೆ ಉತ್ತರಿಸಿದರು. ಸಿದ್ದರಾಮಯ್ಯನವರೇ,ವಿನಾಶ ಕಾಲೇ ವಿಪರೀತ ಬುದ್ಧಿ. ರಾಮಭಕ್ತರನ್ನು ನಾಶ ಮಾಡಲು ನೀವೇನಾದರೂ ಪ್ರಯತ್ನಿಸುತ್ತೀರಾ? ಅಂತಹ ಪ್ರಮಾದ ಮಾಡಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ನಿಮ್ಮ ಫಲಿತಾಂಶವನ್ನು ಶೂನ್ಯ ಮಾಡಲಿದ್ದಾರೆ. ರಾಮಭಕ್ತರ ಜೊತೆ ಘರ್ಷಣೆಗಿಳಿಯಬೇಡಿ ಎಂದು ತಾಕೀತು ಮಾಡಿದರು.
ಮುಸ್ಲಿಮ್ ಯುವಕರೇ ಎಚ್ಚರ-ಓವೈಸಿ: ಇದೇ ವೇಳೆ ಎಐಎಂಐಎA ಮುಖ್ಯಸ್ಥ ಅಸಾದುದ್ದೀನ್ ಓವೈಸಿ ರಾಮಮಂದಿರ ಉದ್ಘಾಟನೆ ಸನ್ನಿಹಿತ ವಾಗುತ್ತಿದ್ದಂತೆಯೇ ಮುಸ್ಲಿಮ್ ಯುವಕರೆಲ್ಲರೂ ಜಾಗೃತರಾಗಿರುವಂತೆ ಕರೆ ನೀಡಿದ್ದಾರೆ.
ಯುವಕರೇ ನಾವು ಈಗಾಗಲೇ ಒಂದು ಮಸೀದಿ ಕಳೆದುಕೊಂಡಿದ್ದೇವೆ. ನಿಮ್ಮ ಮನಸ್ಸಿಗೆ ನೋವಾಗುವುದಿಲ್ಲವೇ ಎಂದು ಹೇಳಿದ್ದಾರೆ. ೫೦೦ ವರ್ಷಗಳಿಂದ ಕುರಾನ್ ಪಠಿಸುತ್ತಿದ್ದ ಸ್ಥಳ ಇಂದು ನಮ್ಮ ಕೈಯಲಿಲ್ಲ. ಇನ್ನೂ ಮರ‍್ನಾಲ್ಕು ಮಸೀದಿಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಚು ನಡೆಯುತ್ತಿರುವುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.


