Monday, March 9, 2026
Flats for sale
Homeಜಿಲ್ಲೆಕಾಸರಗೋಡು : ಕೆರೆಯಲ್ಲಿ ವಯೋವೃದ್ಧ ದಂಪತಿಗಳ ಶವವಾಗಿ ಪತ್ತೆ.

ಕಾಸರಗೋಡು : ಕೆರೆಯಲ್ಲಿ ವಯೋವೃದ್ಧ ದಂಪತಿಗಳ ಶವವಾಗಿ ಪತ್ತೆ.

ಕಾಸರಗೋಡು : ವಯೋವೃದ್ಧ ದಂಪತಿಗಳ ಪಾರ್ಥಿವ ಶರೀರವು ಅವರ ಮನೆಯ ಸಮೀಪದ ಕೊಳದಲ್ಲಿ ಡಿಸೆಂಬರ್ 23 ರ ಶನಿವಾರ ಸಂಜೆ ಪಣತ್ತಡಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಪಣತ್ತಡಿ ನೀಲಾಚಲ ನಿವಾಸಿ ಎನ್ ಕೃಷ್ಣ ನಾಯ್ಕ್ (84) ಮತ್ತು ಅವರ ಪತ್ನಿ ಐತಮ್ಮ ಬಾಯಿ (80) ಎಂದು ಗುರುತಿಸಲಾಗಿದೆ.

ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದರು ಅವರ ಪತ್ತೆಗೆ ಶೋಧ ನಡೆಸಿದಾಗ ಕೆರೆಯಲ್ಲಿ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.

ಇಬ್ಬರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೃಷ್ಣಾನಾಯ್ಕ್ ಅವರು ಮಾಜಿ ಪಂಚಾಯತ್ ಸದಸ್ಯರಾಗಿದ್ದರು. ಆಕಸ್ಮಿಕವಾಗಿ ದಂಪತಿ ಕೆರೆಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ರಾಜಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular