Monday, February 2, 2026
Flats for sale
Homeಜಿಲ್ಲೆಕುಂದಾಪುರ: 2 ಕಾರುಗಳ ನಡುವೆ ಡಿಕ್ಕಿ,ಮೂವರಿಗೆ ಗಂಭೀರ ಗಾಯ.

ಕುಂದಾಪುರ: 2 ಕಾರುಗಳ ನಡುವೆ ಡಿಕ್ಕಿ,ಮೂವರಿಗೆ ಗಂಭೀರ ಗಾಯ.

ಕುಂದಾಪುರ : ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಅಂಪಾರು ಸಮೀಪದ ಮೂಡುಬಾಗೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕುಂದಾಪುರ ಕಡೆಯಿಂದ ಹೊಸಂಗಡಿ ಕಡೆಗೆ ಸ್ಯಾಂಟ್ರೋ ಕಾರೊಂದು ತೆರಳುತ್ತಿದ್ದಾಗ ಎದುರಿನಿಂದ ಆಲ್ಟೋ ಕಾರು ಬರುತ್ತಿತ್ತು. ಆ ಸಂದರ್ಭದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ ಆಲ್ಟೋ ಕಾರು ಚಾಲಕ ಹಾಗೂ ಸ್ಯಾಂಟ್ರೋ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular