Tuesday, July 7, 2026
Homeರಾಜಕೀಯಗಂಗಾವತಿ : ಅಧಿವೇಶನದ ಮಧ್ಯೆ ರಾಜಹಂಸಗಢಕ್ಕೆ ಶಾಸಕ ರೆಡ್ಡಿ ಭೇಟಿ.

ಗಂಗಾವತಿ : ಅಧಿವೇಶನದ ಮಧ್ಯೆ ರಾಜಹಂಸಗಢಕ್ಕೆ ಶಾಸಕ ರೆಡ್ಡಿ ಭೇಟಿ.

ಗಂಗಾವತಿ : ಬೆಳಗಾವಿಯ ಅಧಿವೇಷನದಲ್ಲಿ ಭಾಗಿಯಾಗಿರುವ ಗಂಗಾವತಿ ಶಾಸಜ ಜಿ. ಜನಾರ್ದರೆಡ್ಡಿ, ಬಿಡುವಿನ ವೇಳೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಸಂಹಗಢಕ್ಕೆ ಭೇಟಿ ನೀಡಿ ರಾಜಕೀಯ ಜಂಜಾಟದ ಮಧ್ಯೆ ಕೆಲಕಾಲ ಪ್ರಕೃತಿ ಸೌಂದರ್ಯ ಸವಿದರು.

ಇದೇ ವರ್ಷದಲ್ಲಿ ರಾಜ್ಯ ಸಕರ್ಾರದ ಐದು ಕೋಟಿ ಮೊತ್ತದಲ್ಲಿ ನಿಮರ್ಾಣವಾಗಿದ್ದ ಶಿವಾಜಿ ಮಹರಾಜದ ಪ್ರತಿಮೆಯನ್ನು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಈ ಸ್ಥಳಕ್ಕೆ ಶಾಸಕ ರೆಡ್ಡಿ ಭೇಟಿ ನೀಡಿ ಕೆಲಕಾಲ ಕಳೆದರು.

ಕೋಟೆಯಲ್ಲಿರುವ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ರೆಡ್ಡಿ, ನಂತರ ಶಿವಾಜಿ ಮಹಾರಾಜರ ಪುತ್ತಳಿಯ ಬಳಿ ಸ್ಥಳೀಯ ಸಕರ್ಾರಿ ಶಾಲೆಯ ಮಕ್ಕಳೊಂದಿಗೆ ಫೋಟೋ ಸೆಷನ್ಗೆ ಫೋಸ್ ನೀಡಿದರು. ಕೋಟೆಯ ಸುತ್ತಮುತ್ತಲಿನ ಆವರಣದಲ್ಲಿ ಕೆಲಕಾಲ ಸಂತೋಷದಿಂದ ಸಮಯ ಕಳೆದರು.

ಈ ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ಅಂದಿನ ಶಾಸಕ ಸಂಜಯ್ ಪಾಟೀಲ್, ಸಂಸದ ಸುರೇಶ ಅಂಗಡಿಯೊಂದಿಗೆ ಭೇಟಿ ನೀಡಿ ತಾಣದ ಅಭಿವೃದ್ಧಿಗೆಗೆ 11 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದನ್ನು ರೆಡ್ಡಿ 14 ವರ್ಷದ ಬಳಿಕ ಅದೇ ಸ್ಥಳಕ್ಕೆ ತೆರಳಿ ಸ್ಮರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular