ಹಾಸನ : ಜಿಲ್ಲೆಯ ಬೇಲೂರುಪಟ್ಟಣದ ಹೊರವಲಯದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ – ಗಲಾಟೆ ನಡೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ವರದಿಯಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು ಈ ವೇಳೆ ಬಿ.ಶಿವರಾಮ್ ಮಾತನಾಡುತ್ತಿದ್ದ ಸಭೆಗೆ ರಾಜಶೇಖರ್ ಬಂದಿದ್ದರು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರ ಒಗ್ಗಟ್ಟು ಇಲ್ಲದರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ಶಿವರಾಮ್ ಹೇಳಿದ್ದಾರೆ ಈ ಸಂದರ್ಭದಲ್ಲಿ ಬಿ.ಶಿವರಾಮ್ ಹಾಗೂ ರಾಜಶೇಖರ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.ಇದರಿಂದ ಕೆರಳಿದ ರಾಜಶೇಖರ್ ಬೆಂಬಲಿಗರು ಬಿ.ಶಿವರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರು ನಾಯಕರ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮಾರಾಮಾರಿಯಾಗಿದೆ.ಈ ವೇಳೆ ಸಿಕ್ಕ ಸಿಕ್ಕ ಚೇರ್ ಗಳನ್ನ ಪುಡಿ ಮಾಡಿದ್ದಾರೆ.
ಬಿ.ಶಿವರಾಮ್ ಕಳೆದ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು ರಾಜಶೇಖರ್ ಕೂಡ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದ ಮಾಜಿ ಸಚಿವ ಬಹಳ ಶಿವರಾಮ್ ಗಲಾಟೆ ಗದ್ದಲದಿಂದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆಯಲ್ಲಿ ಧನಪಾಲ್, ಮಲ್ಲೇಶ್ ಸೇರಿದಂತೆ ಹಲವರಿಗೆ ಗಾಯವಾಗಿದ್ದು ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


