ಹೊಸನಗರ : ಅಕ್ರಮ ವಾಗಿ ಮರಳು ಸಾಗಾಟ ಮಾಡುತ್ತಿದ್ದ ಐದು ಟಿಪ್ಪರ್ ಗಳನ್ನು ಹೊಸನಗರ ಪಟ್ಟಣದ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫ಼ಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪಿಎಸ್‌ಐ ಶಿವಾನಂದ್.ಕೆ ನೇತ್ರತ್ವದ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದ್ದಾರೆ.
ಸೋಮವಾರ ತಡ ರಾತ್ರಿ ದೊರೆತ ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಪಟ್ಟಣದ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿಯನ್ನು ವಶಪಡಿಸಿ ಕೊಂಡಿದ್ದಾರೆ
ಅಕ್ರಮ ಮರಳು ತುಂಬಿಕೊಂಡು ಸಾಗಿಸುತ್ತಿರುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ದುಮ್ಮ ವಿಶ್ವನಾಥ್ , ದುಮ್ಮ ಮಹೇಶ್ ,ವಿಜೇಂದ್ರ ಹರಿದ್ರಾವತಿ ,ವಿಜೇತ ಹಾಗೂ ಮಂಜುನಾಥ್ ಸಾಗರ ಎಂಬುವವರಿಗೆ ಸೇರಿದ ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅವಿನಾಶ್ , ಗಂಗಪ್ಪ ,ಗೋಪಾಲಕೃಷ್ಣ ಹಾಗೂ ಸುನೀಲ್ ಇದ್ದರು


