ಹೊಸದಿಲ್ಲಿ: ಕತಾರ್‌ನಲ್ಲಿ ಎಂಟು ಭಾರತೀಯ ನೌಕಾಪಡೆಯ ಯೋಧರನ್ನು ಬಿಡುಗಡೆ ಮಾಡುವಲ್ಲಿ ನಾನು ಯಾವುದೇ ಪಾತ್ರವನ್ನು ವಹಿಸಿಲ್ಲ ಎಂಬ ಹೇಳಿಕೆಯನ್ನು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ “ನಿಸ್ಸಂದಿಗ್ಧವಾಗಿ” ನಿರಾಕರಿಸಿದ್ದಾರೆ ಮತ್ತು ಇದನ್ನು ಕೇವಲ ಭಾರತ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.
ಗೂಢಚಾರಿಕೆ ಆರೋಪದ ಮೇಲೆ 18 ತಿಂಗಳ ಕಾಲ ಜೈಲಿನಲ್ಲಿದ್ದ ಎಂಟು ಯೋಧರು ಬಿಡುಗಡೆಯಾದ ನಂತರ, ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಯಶಸ್ವಿಯಾಗಿ ಬಿಡುಗಡೆಗೊಳಿಸುವ ಹಿಂದೆ ನಟ ಶಾರುಖ್ ಖಾನ್ ಪಾತ್ರವಿದೆ ಹೇಳಿದ್ದರು.
ಶಾರುಖ್ ಖಾನ್ ಕಚೇರಿ ಈ ಕುರಿತು ಸ್ಪಷ್ಟನೆ ನೀಡಿದೆ. ಕತಾರ್ ಸರ್ಕಾರ ಗಲ್ಲು ಶಿಕ್ಷೆ ನೀಡಿದ್ದ ಭಾರತದ ನೌಕಾಸೇನಾ ಮಾಜಿ ಸಿಬ್ಬಂದಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಿಡುಗಡೆಯಲ್ಲಿ ನಟ ಶಾರುಖ್ ಖಾನ್ ಪ್ರಮುಖ ಪಾತ್ರನಿರ್ವಹಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಸ್ಪಷ್ಪಡಿಸುವುದೇನೆಂದರೆ, ಅಧಿಕಾರಿಗಳ ಬಿಡುಗಡೆಯಲ್ಲಿ ಶಾರುಖ್ ಖಾನ್ ಯಾವುದೇ ಪಾತ್ರವಿಲ್ಲ. ಈ ರಾಜತಾಂತ್ರಿಕ ವಿಚಾರದಲ್ಲಿ ಶಾರುಖ್ ಖಾನ್ ಯಾವುದೇ ನೆರವು ನೀಡಿಲ್ಲ. ಈ ವಿಚಾರವನ್ನು ಭಾರತ ರಾಜತಾಂತ್ರಿಕತೆ ಮೂಲಕ ಯಶಸ್ವಿಯಾಗಿ ನಿರ್ವಹಿಸಿದೆ. ಭಾರತ ರಾಜತಾಂತ್ರಿಕ ವಿಚಾರದಲ್ಲಿ ಅತ್ಯುತ್ತಮ ನಾಯಕರನ್ನು ಹೊಂದಿದ್ದು, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾವಿನ ದವಡೆಯಿಂದ ನೌಕಾ ಸೇನಾ ಮಾಜಿ ಅಧಿಕಾರಿಗಳನ್ನು ಭಾರತ ಯಶಸ್ವಿಯಾಗಿ ಬಿಡಿಸಿರುವುದು ಎಲ್ಲರಂತೆ ಶಾರುಖ್ ಖಾನ್‌ಗೂ ಸಂತಸವಾಗಿದೆ. ತವರಿಗೆ ಮರಳಿರುವ ನಿವೃತ್ತ ಅಧಿಕಾರಿಗಳಿಗೆ ಶುಭಾಶಯಗಳು ಎಂದು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ ಮೆಗಾಸ್ಟಾರ್ ಇತ್ತೀಚೆಗೆ ಕತಾರ್‌ನ ರಾಜಧಾನಿ ದೋಹಾದಲ್ಲಿ ವಿಶೇಷ ಅತಿಥಿಯಾಗಿ AFC ಫೈನಲ್‌ಗೆ ಹಾಜರಾಗಲು ಬಂದಿದ್ದರು. ಯುಎಇಯಲ್ಲಿರುವ ಪ್ರಧಾನಿ ಮೋದಿ ಬುಧವಾರ ಕತಾರ್‌ಗೆ ಪ್ರಯಾಣಿಸಲಿದ್ದು, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲಿದ್ದಾರೆ.
ಬಿಡುಗಡೆಯಾದ ನಂತರ, ನೌಕಾಪಡೆಯ ಅನುಭವಿ – ಈಗಾಗಲೇ ಭಾರತಕ್ಕೆ ಮರಳಿರುವ ಏಳು ಮಂದಿಯಲ್ಲಿ ಒಬ್ಬರು – ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಅವರ “ವೈಯಕ್ತಿಕ ಹಸ್ತಕ್ಷೇಪ” ಇಲ್ಲದೆ ಅವರು ಬಿಡುಗಡೆ ಹೊಂದುತ್ತಿರಲಿಲ್ಲ ಎಂದು ಹೇಳಿದರು.
ಸುಬ್ರಮಣಿಯನ್ ಸ್ವಾಮಿ ಮಾಡಿದ ಟ್ವೀಟ್ ಭಾರಿ ವೈರಲ್ ಆಗಿತ್ತು. ಪ್ರಧಾನಿ ಮೋದಿ, ಬಿಜೆಪಿ ವಿರೋಧಿಗಳು, ಕಾಂಗ್ರೆಸ್ ಬೆಂಬಲಿಗರು, ಟಿಎಂಸಿ ನಾಯಕಿ ಸೇರಿದಂತೆ ಹಲವರು ಇದೇ ಟ್ವೀಟ್ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯಿಂದ 8 ನಿವೃತ್ತ ಅಧಿಕಾರಿಗಳು ಕತಾರ್ ಜೈಲು ಶಿಕ್ಷೆಯಿಂದ ಪಾರಾಗಿಲ್ಲ. ಇದಕ್ಕೆ ಶಾರುಖ್ ಖಾನ್ ಕಾರಣ. ಅಸಮರ್ಥ ಸರ್ಕಾರ ಆಡಳಿತದಲ್ಲಿ ಸಮರ್ಥವಾಗಿ ತನ್ನ ಶಕ್ತಿ ಬಳಸಿ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ ಶಾರುಖ್ ಖಾನ್‌ಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಬೆಂಬಲಿಗರ ಅಧಿಕೃತ ಟ್ವಿಟರ್, ಟಿಎಂಸಿ ನಾಯಕಿ ಸೇರಿದಂತೆ ಇತರ ನಾಯಕರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.


