ಹೊನ್ನಾವರ : ಆಕಳು ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಮಾಸುವ ಮೊದಲೇ ತಾಲೂಕಿನ ಸಾಲ್ಕೋಡಿನಲ್ಲಿ ಸಹ ಮೇಯಲು ಬಿಟ್ಟಿದ್ದ ಗರ್ಭ ಧರಿಸಿದ್ದ ಹಸುವೊಂದನ್ನು ಕೊಂದು ಹೇಯ ಕೃತ್ಯ ಎಸಗಿದ ಭೀಭತ್ಸ ಘಟನೆ ನಡೆದಿದೆ. ಗೋಮಾತೆಯ ರುಂಡ, ಕಾಲುಗಳನ್ನು ಹಾಗೂ ಗರ್ಭದಲ್ಲಿದ್ದ ಕರುವನ್ನು ಸ್ಥಳದಲ್ಲಿ ಎಸೆದು ಮಾಂಸವನ್ನು ಮಾತ್ರ ಎತ್ತೊಯ್ದ ಅಮಾನವೀಯ, ಅನಾಗರಿಕ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಆಕಳು ಸಾಲ್ಕೊಡಿನ ಕೊಂಡಾಕುಳಿಯ ಕೃಷ್ಣ ಆಚಾರಿ ಎನ್ನುವವರಿಗೆ ಸೇರಿದ್ದಾಗಿದೆ. ಪ್ರತಿದಿನ ಮೇಯಲು ಹೋಗುವ ಆಕಳು ಸಂಜೆ ಐದು ಗಂಟೆಗೆ ಕೊಟ್ಟಿಗೆಗೆ ಮರಳುತ್ತಿತ್ತು. ಆಕಳು ಸಂಜೆಯಾದರೂ ಬರಲಿಲ್ಲ. ನಂತರ ಎಲ್ಲೆಡೆ ಹುಡುಕಾಡಿದೆವು. ಮರುದಿನ ಮುಂಜಾನೆ ಹುಡುಕಲು ಹೋದಾಗ ಬೆಟ್ಟದಲ್ಲಿಆಕಳ ರುಂಡ ಬಿದ್ದಿರುವುದು ಕಂಡಿತು. ಆ ಕಡೆ ಈ ಕಡೆ ನೋಡಿದಾಗ ಅದರ ಕಾಲುಗಳನ್ನ ಕತ್ತರಿಸಿ ಬಿಸಾಡಿರುವುದು ಕಂಡುಬAತು ಹಸುವಿನ ದೇಹದ ಭಾಗ- ಮಾಂಸವನ್ನು ಮಾತ್ರ ಒಯ್ದಿದ್ದಾರೆ. ಆಕಳು ಗರ್ಭಧರಿಸಿ ಐದಾರು ತಿಂಗಳು ಆಗಿರಬಹುದು. ಅದರ ಹೊಟ್ಟೆಯೊಳಗಿರುವ ಕರುವಿನ ಭ್ರೂಣವನ್ನು ಹೊರತೆಗೆದು ಅದನ್ನು
ಸೀಳಿ ಹತ್ಯೆ ಮಾಡಿ ಬಿಸಾಡಿದ್ದಾರೆ ಎಂದು ಕೃಷ್ಣ ಆಚಾರಿ ದುಃಖಿತರಾಗಿ ತಿಳಿಸಿದ್ದಾರೆ.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಆಚಾರಿ ಅವರು ದೂರು ದಾಖಲಿಸಿದ್ದಾರೆ. ಪಿ.ಎಸ್.ಐ. ಮಂಜುನಾಥ್ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯು ತೀವ್ರ ಖಂಡನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರುಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾಗಿ ಸಚಿವರು ತಿಳಿಸಿದರು.