Friday, November 22, 2024
Flats for sale
Homeರಾಜ್ಯಹೊನ್ನಾಳಿ : ಹೊನ್ನಾಳಿ ಪಟ್ಟಣದ ತೆಗ್ಗಿನ ಮಠದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಂದ್ರಯಾನ ಯಶಸ್ವಿಗೆ ವಿಶೇಷ...

ಹೊನ್ನಾಳಿ : ಹೊನ್ನಾಳಿ ಪಟ್ಟಣದ ತೆಗ್ಗಿನ ಮಠದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಂದ್ರಯಾನ ಯಶಸ್ವಿಗೆ ವಿಶೇಷ ಪೂಜೆ.

ಹೊನ್ನಾಳಿ : ಹೊನ್ನಾಳಿ ಪಟ್ಟಣದ ತೆಗ್ಗಿನ ಮಠದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ  ಇಂದು ಇಸ್ರೋ ತಂಡದ ಚಂದ್ರಯಾನ-3 ಯಶಸ್ವಿಗಾಗಿ ಇಳಿಯಲಿ ಎಂದು ರಾಷ್ಟ್ರೀಯ ಸ್ವಯಂಸೇವಕರು  ವಿಶೇಷ ಪೂಜೆ ನೆರವೇರಿಸಿದರು.

ರಾಷ್ಟ್ರೀಯ ಸ್ವಯಂಸೇವಕರು:  ಚಂದ್ರಯಾನ -3ರ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲಿ ಎಂದು ವಿಶೇಷ ಪೂಜೆ ನೆರವೇರಿಸಿದರು.

ಚಂದ್ರಯಾನ -3ರ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು, ಭಾರತ ದೇಶದ ಕೀರ್ತಿ ಪತಾಕೆಯನ್ನು ಚಂದ್ರನಲ್ಲಿ ಅಚ್ಚಳಿಯದೇ ಸ್ಥಾಪಿಸಲಿ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ನೆರವೇರಿಸಿದ ರಾಷ್ಟ್ರೀಯ ಸ್ವಯಂಸೇವಕರು , ಇಸ್ರೋ ವಿಜ್ಞಾನಿಗಳ ಶ್ರಮದ ಫಲ ಸಾಂಗೋಪಾಂಗವಾಗಿ ನೆರವೇರಬೇಕು. ಚಂದ್ರಸ್ಪರ್ಶ ಕಾರ್ಯಾಚರಣೆಯಿಂದ ಭಾರತ ದೇಶಕ್ಕೆ ಮತ್ತೊಂದು ಕಿರೀಟ ಮುಡಿಗೇರಲಿ ಎಂದು ರಾಷ್ಟ್ರೀಯ ಸ್ವಯಂಸೇವಕರು ಹಾರೈಸಿ, ವಿಶೇಷ ಪೂಜೆಯನ್ನು ಮಾಡಿದರು.

ಪ್ರತಿಯೊಬ್ಬ ಭಾರತೀಯನ್ನು ಹೆಮ್ಮೆಪಡುವ ಕ್ಷಣಕ್ಕೆ ಕ್ಷಣ ಗಣನೆ ಶುರುವಾಗಿದೆ, ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಸಲು ಇಸ್ರೋ ವಿಜ್ಞಾನಿಗಳು ಎಲ್ಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದು, ಭಾರತದ ಇತಿಹಾಸದಲ್ಲಿ ಹೊಸ ಮೈಲಿಗಳನ್ನು ಸಾಧಿಸಲಿರುವ ಈ ಕಾರ್ಯದಲ್ಲಿ ಇಸ್ರೋ ತಂಡವು ಯಶಸ್ವಿಯಾಗಲಿ ಎಂದು  ರಾಷ್ಟ್ರೀಯ ಸ್ವಯಂಸೇವಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಮಾಡುವ ಮೂಲಕ ಶುಭ ಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕರಾದ ಉಮಾ ಕಾಂತ್ ಜೋಯಿಸ್, ಶ್ರೀನಿವಾಸ್, ಭರತ್ ಸತ್ತಿಗಿ, ಕುಶಾಲ್, ತೇಜಸ್, ಹರ್ಷಿತ್ ಇನ್ನು ಹಲವಾರು ಸ್ವಯಂಸೇವಕರು ಹಾಗೂ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular