ಹೈದೆರಾಬಾದ್ : ಐಪಿಎಲ್‌ನ ಲಕ್ನೊ ಫ್ರಾಂಚೈಸಿ ತಂಡದ ಮಾಲೀಕ ಸಂಜೀವ ಗೊಯೆಂಕ ತಂಡದ ನಾಯಕ ಕೆ.ಎಲ್.ರಾಹುಲ್ ವಿರುದ್ಧ ಬಹಿರಂಗವಾಗಿ ರೇಗಾಡಿದ ಘಟನೆ ನಡೆದಿದೆ.
ನಿನ್ನೆ ಸನ್ ರೈರ‍್ಸ್ ವಿರುದ್ಧದ ಐಪಿಎಲ್ಪಂ ದ್ಯದಲ್ಲಿ ಲಕ್ನೊ ತಂಡ ೧೦ ವಿಕೆಟ್‌ಗಳಿಂದ ಹೀನಾಯವಾಗಿ ಸೋಲು ಕಂಡಿತು. ಈ ಸೋಲಿನೊಂದಿಗೆ ಲಕ್ನೊ ತಂಡದ ಪ್ಲೇ ಆಫ್‌ಗೆ ಹೋಗುವುದು ಅನುಮಾನದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಪಂದ್ಯ ಮುಗಿದ ಬಳಿಕ ಲಕ್ನೊ ಫ್ರಾಂಚೈಸಿ ಮಾಲೀಕ ಸಂಜೀವ ಗೊಯೆಂಕ ನಾಯಕ ರಾಹುಲ್ ಬಳಿ ಬಹಿರಂಗವಾಗಿ ರೇಗಾಡಿ ಅಸಮಾಧಾನ ಹೊರಹಾಕಿದರು.
ಇದಕ್ಕೆ ನಾಯಕ ಕೆ.ಎಲ್.ರಾಹುಲ್ ಶಾಂತವಾಗಿ ಪ್ರತಿಕ್ರಿಯಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಂಜೀವ ಗೊಯೆಂಕ ಅವರ ವರ್ತನೆಯನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿಸಿದ್ದಾರೆ. ಮಾಲೀಕ ಸಂಜೀವಾ ಗೊಯೆಂಕ ತಂಡದ ಆಟಗಾರರನ್ನು ಪ್ರೋತ್ಸಾಹಿಸುವದನ್ನು ಬಿಟ್ಟು ತಮಗೆ ಕ್ರಿಕೆಟ್ ಚೆನ್ನಾಗಿ ಗೊತ್ತು ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಈ ರೀತಿಯ ಜಗಳವನ್ನು ಕ್ಯಾಮರಾ ಮುಂದೆ ಅಲ್ಲ ನಾಲ್ಕು ಗೋಡೆ ಮಧ್ಯೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.


