Monday, March 31, 2025
Flats for sale
Homeಸಿನಿಮಾಹೈದರಾಬಾದ್ : ಬೆಟ್ಟಿಂಗ್ ಆಪ್ ಪ್ರಚಾರ : ಖ್ಯಾತ ನಟ ಪ್ರಕಾಶ್‌ರಾಜ್, ದೇವರಕೊಂಡ ಸೇರಿ 25...

ಹೈದರಾಬಾದ್ : ಬೆಟ್ಟಿಂಗ್ ಆಪ್ ಪ್ರಚಾರ : ಖ್ಯಾತ ನಟ ಪ್ರಕಾಶ್‌ರಾಜ್, ದೇವರಕೊಂಡ ಸೇರಿ 25 ಮಂದಿ ವಿರುದ್ಧ ಪ್ರಕರಣ ದಾಖಲು ..!

ಹೈದರಾಬಾದ್ : ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್‌ರಾಜ್,ನಟರಾದ ವಿಜಯ್‌ದೇವರಕೊಂಡ, ರಾಣಾ ದಗ್ಗುಭಾಟಿ ಸೇರಿದಂತೆ ೨೫ಕ್ಕೂ ಹೆಚ್ಚು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ೨೫ನಟ,ನಟಿಯರ ವಿರುದ್ದ ತೆಲಂಗಾಣದಲ್ಲಿ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಉದ್ಯಮಿ ಫಣೀಂದ್ರ ಶರ್ಮಾ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳಲ್ಲಿ ಪ್ರಣೀತಾ, ನಿಧಿಅರ‍್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದರರಾಜನ್,ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌದರಿ, ನಯನಿ ಪಾವನಿ, ನೇಹಾ ಪಠಾಣ್,ಪಾಂಡು, ಪದ್ಮಾವತಿ, ಸನ್ನಿ ಯಾ, ವಿಷ್ಣು,ಸನ್ನಿಯಾ ಪ್ರಿಯಿ, ನಾನು ಶ್ಯಾಮಲಾ, ಟೇಸ್ಟಿ ತೇಜ ಮತ್ತು ಬಂಡಾರು ಶೇಷಾಯನಿ ಸುಪ್ರಿತಾ ಸೇರಿದ್ದಾರೆ.

ಈ ಪ್ಲಾಟ್‌ಫಾರ್ಮ್ಗಳು ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳ ಸಹಾಯದಿಂದ ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ತಮ್ಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಪ್ರಚಾರ ಮಾಡುತ್ತವೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. “ಈ ಅಕ್ರಮ ವೇದಿಕೆಗಳಲ್ಲಿ ಸಾವಿರಾರು ಲಕ್ಷ ರೂಪಾಯಿಗಳು ಭಾಗಿಯಾಗಿವೆ ಮತ್ತು ಇದು ಅನೇಕ ಕುಟುಂಬಗಳನ್ನು, ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತಿದೆ” ಎಂದು ಆರೋಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular