Tuesday, February 4, 2025
Flats for sale
Homeಸಿನಿಮಾಹೈದರಾಬಾದ್ : ಬಾಕ್ಸ್ ಆಫೀಸ್‌ ನಲ್ಲಿ ಸಾವಿರಾರು ಕೋಟಿ ಬಾಚಿದ ಪುಷ್ಪ- 2..!

ಹೈದರಾಬಾದ್ : ಬಾಕ್ಸ್ ಆಫೀಸ್‌ ನಲ್ಲಿ ಸಾವಿರಾರು ಕೋಟಿ ಬಾಚಿದ ಪುಷ್ಪ- 2..!

ಹೈದರಾಬಾದ್ : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಚಿತ್ರ ಪುಷ್ಪ 2 ಬಾಕ್ಸ್ ಆಫೀಸ್‌ನಲ್ಲಿ ಮಿಂಚುತ್ತಲೇ ಇದೆ. ಹೊಸ ವರ್ಷದಂದು ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಹೊಸ ವರ್ಷ ದಂದು
ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಪುಷ್ಪ 2- ದಿ ರೂಲ್’ ಬಿಡುಗಡೆಯಾದ ನಾಲ್ಕನೇ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಾಧನೆ ಮಾಡಿದೆ . ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ಚಿತ್ರ ಬಿಡುಗಡೆಯಾದ ನಂತರ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

ಸುಕುಮಾರ್ ನಿರ್ದೇಶನದ ಈ ಚಿತ್ರ ಇಂದಿಗೂ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡುತ್ತಿದೆ. ವರುಣ್ ಧವನ್ ಅಭಿನಯದ ಬೇಬಿ ಜಾನ್ ಮತ್ತು ಮುಫಾಸಾ ಚಿತ್ರಗಳು ಪುಷ್ಪ 2- ಚಿತ್ರದ ಮುಂದೆ ಮುಗ್ಗರಿಸಿವೆ. ಮೊದಲ ವಾರದಲ್ಲಿ ಒಟ್ಟು725.8 ಕೋಟಿ ಗಳಿಸಿದೆ. ಪುಷ್ಪ 2 ಇದರಲ್ಲಿ ಹಿಂದಿ ಆವೃತ್ತಿ 425.1 ಕೋಟಿ ಗಳಿಸಿದೆ. ಆದರೆ ಎರಡನೇ ವಾರದಲ್ಲಿ ಚಿತ್ರವು 264.8 ಕೋಟಿ ರೂಪಾಯಿ ಗಳಿಸಿದೆ, ಇದರಲ್ಲಿ ಹಿಂದಿ ಆವೃತ್ತಿಯು 196.5 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ.

ಮೂರನೇ ವಾರದಲ್ಲಿ, ಚಿತ್ರವು 129.4 ಕೋಟಿ ಗಳಿಸಿತು, ಅದರಲ್ಲಿ ಹಿಂದಿ ಆವೃತ್ತಿಯು 103.೦5 ಕೋಟಿ ಮತ್ತು ಇತರ ಭಾೆಗಳಲ್ಲಿ ಚಿತ್ರ ಗಳಿಸಿದೆ. ಈಗ ಬಿಡುಗಡೆಯಾದ 28ನೇ ದಿನಕ್ಕೆ ಚಿತ್ರ 13.15 ಕೋಟಿ ಗಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular