ಹೈದರಾಬಾದ್ : ಗುಜರಾತ್ ಟೈಟಾನ್ಸ್ ತಂಡದ ವೇಗಿ ಇಶಾಂತ್ ಶರ್ಮಾ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಸ್ತು ಕ್ರಮ ಕೈಗೊಂಡಿದ್ದು, ದಂಡ ವಿಧಿಸಿದೆ. ಐಪಿಎಲ್ 2025 ರಲ್ಲಿ ಇಶಾಂತ್ ಈಗಾಗಲೇ ಕೇವಲ ಒಂದು ವಿಕೆಟ್ ಸಂಪಾದಿಸಿದ್ದು ದುಬಾರಿ ಬೌಲರ್ ಎನ್ನಿಸಿಕೊಂಡಿದ್ದಾರೆ.
ಇದರ ಮಧ್ಯೆ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ, ಒಟ್ಟು ೫೩ ರನ್‌ಗಳನ್ನು ನೀಡಿದ್ದರು. ಇಶಾಂತ್ ಅವರ ಪಂದ್ಯ ಶುಲ್ಕದ ಶೇ.೨೫% ದಂಡ ವಿಧಿಸಲಾಗಿದ್ದು, ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ ೨.೨ ರ ಅಡಿಯಲ್ಲಿ ಅವರು ಲೆವೆಲ್ ೧ ಅಪರಾಧವನ್ನು ಮಾಡಿದ್ದಾರೆಂದು ಹೇಳಲಾಗಿದೆ. ಮ್ಯಾಚ್ ರೆಫರಿಯ ನಿರ್ಧಾರವನ್ನು ಅಂತಿಮ ಮತ್ತು ಬದ್ಧವೆಂದು ಪರಿಗಣಿಸಲಾಗಿದ್ದು, ಬಿಸಿಸಿಐ ಈ ಕ್ರಮ ಜರುಗಿಸಿದೆ.
ಆರ್ಟಿಕಲ್ 2.2 ಪ್ರಕಾರ ವಿಕೆಟ್‌ಗಳನ್ನು ಹೊಡೆಯುವುದು ಅಥವಾ ಒದೆಯುವುದು ಅಥವಾ ಹತಾಶೆ ಅಥವಾ ನಿರ್ಲಕ್ಷ್ಯದಿಂದಾಗಿ ಜಾಹೀರಾತು ಫಲಕಗಳು, ಬೌಂಡರಿ ಬೇಲಿಗಳು ಮತ್ತು ಇತರ ಫಿಕ್ಸ್ಚರ್‌ಗಳಿಗೆ ಹಾನಿ ಉಂಟುಮಾಡುವಂತಹ ಕ್ರಮಗಳಲ್ಲಿ ಯಾವುದಾದರೂ ಒಂದರಲ್ಲಿ ಗುರುತಿಸಿಕೊAಡರೂ, ದಂಡ ವಿಧಿಸಲಾಗುತ್ತದೆ.