ಹೆಬ್ರಿ : ಹೆಬ್ರಿ ಸಮೀಪದ ವರಂಗದ ಮತ್ತಿಬೆಟ್ಟು ಎಂಬಲ್ಲಿ ಭಾನುವಾರ ದ್ವಿಚಕ್ರ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೂರಿಮಣ್ಣಿನ ಪ್ರಭಾಚಂದ್ರ ಆಚಾರ್ಯ ಮೃತರು. ಇವರು ಭಾನುವಾರ ಮಧ್ಯಾಹ್ನ ಮುನಿಯಾಲು ಕಡೆಯಿಂದ ಸೂರಿಮಣ್ಣು ಕಡೆಗೆ ಹೋಗುತ್ತಿದ್ದಾಗ ಅವರ ವಾಹನ ರಸ್ತೆ ಬದಿಗೆ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


