Thursday, March 12, 2026
Flats for sale
Homeಜಿಲ್ಲೆಹೆಬ್ರಿ ; ಬಸ್ಸಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಶಿಕ್ಷಕರ ಸಾವು .

ಹೆಬ್ರಿ ; ಬಸ್ಸಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಶಿಕ್ಷಕರ ಸಾವು .

ಹೆಬ್ರಿ ; ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೀತಾನದಿಯಾ ಸಮೀಪ ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಶಿಕ್ಷಕರು ಮೃತಪಟ್ಟು ಇನ್ನಿಬ್ಬರು ಗಂಬೀರ ಗಾಯಗೊಂಡ ಘಟನೆ ನಡೆದಿದೆ.

ಮೃತರು ಉಡುಪಿಯ ಡಿಡಿಪಿಐ ಕಛೇರಿಯ ಪ್ರಥಮ ದರ್ಜೆ ಸಹಾಯಕ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿಯ ಇಂದಿರಾ ನಗರ ಶಾಲೆಯ ದೈಹಿಕ ಶಿಕ್ಷಕ ಸೋಮಶೇಖರ್ ಎಂದು ತಿಳಿಯಲಾಗಿದೆ.

ದಾವಣಗೆರೆಯ ಚೆನ್ನಾಗಿರಿಯಲ್ಲಿ ಸ್ನೇಹಿತನ ವಿವಾಹ ಮುಗಿಸಿ ಉಡುಪಿಗೆ ಬರುತ್ತಿರುವ ಸಂದರ್ಭದಲ್ಲಿ ಜಕ್ಕನಮಕ್ಕಿ ತಿರುವಿನ ಬಳಿ ಈ ಘಟನೆ ನಡೆದಿದೆ.

ಇನ್ನಿಬ್ಬರು ಶಿಕ್ಷಕರಾದ ಸುದರ್ಶನ್ ಹಾಗೂ ಕಾರು ಚಾಲಕ ಸತೀಶ್ ರವರಿಗೆ ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಉಡುಪಿ ಮಾರ್ಗದಿಂದ ಆಗುಂಬೆ ಗೆ ಹೋಗುತ್ತಿದ್ದು ,ಅವಸರವೇ ಅಪಘಾತ ಕ್ಕೆ ಕಾರಣವಾಗಿದೆ . ಸ್ಥಳದಲ್ಲಿ ರಕ್ಷಣಾಕಾರ್ಯಚರಣೆ ವೇಗದಲ್ಲಿ ನಡೆದಿದ್ದು , ಹೆಬ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular