ಹುಬ್ಬಳ್ಳಿ : ನಗರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಸೈಕೋಪಾತ್‌ನೊಬ್ಬ 5 ವರ್ಷ ಬಾಲಕಿಯನ್ನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆಗೆ ಅವಳಿನಗರದ ಜನ ಬೆಚ್ಚಿಬಿದ್ದಿತ್ತು. ಅಲ್ಲದೆ, ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕೆಂದು ಆಗ್ರಹಿಸಿ ಹೋರಾಟ ಮಾಡಲಾಗಿತ್ತು.. ಇದೀಗ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ..
ಹೌದು.. ಬಿಹಾರ ಮೂಲದ ಸೈಕೋಪಾತ್ ರಿತೇಶ್ ಕ್ರಾಂತಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ, ಅದು ವಿಫಲವಾದ ಹಿನ್ನಲೆ, ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ಘಟನೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಧ್ಯಾಪಕ ನಗರದಲ್ಲಿ ನಡೆದಿದೆ.
ಬಾಲಕಿಯ ತಂದೆ ಪೇಂಟಿಂಗ್ ಕೆಲಸ, ತಾಯಿ ಮನೆ ಮನೆ ಕೆಲಸ ಮಾಡಿ ಜೀವನ ಮಾಡುತ್ತಿದ್ದಾರೆ. ಅದರಂತೆ ಇಂದು ಸಹ ತಾಯಿ ತನ್ನ ಐದು ವರ್ಷ ಮಗಳನ್ನು ಕರೆದುಕೊಂಡು, ಮನೆ ಕೆಲಸಕ್ಕೆ ಹೋಗಿದ್ದರು, ಈ ವೇಳೆ ಬಾಲಕಿ ಕಾಂಪೌಂಡ್ ಒಳಗೆ ಆಟವಾಡುತ್ತಿದ್ದಳು.
ಈ ವೇಳೆ ಬಿಹಾರ್ ಮೂಲ ರಕ್ಷಿತ್ ಕ್ರಾಂತಿ, ಬಾಲಕಿ ಬಳಿ ಬಂದು ಪುಸಲಾಯಿಸಿ ಕಂಪೌಂಡ್ ಹಾರಿ ಎತ್ತಿಕೊಂಡು, ಪಾಳು ಬಿದ್ದ ಶೆಡ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಬಾಲಕಿ ಚೀರಾಟ ನಡೆಸಲು ಮುಂದಾದಾಗ, ಇದರಿಂದ ಜನ ಶೆಡ್ಡನತ್ತ ಬರಲು ಶುರುಮಾಡಿದರು. ಈ ವೇಳೆ ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿದ ಕಿರಾತಕ ಪರಾರಿಯಾಗಿದ್ದ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದರು, ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿ ಮರಣೋತ್ತರ ಪರೀಕ್ಷೆ ನಡೆಯಿತು.. ಮತ್ತೊಂದು ಕಡೆ ಬಾಲಕಿ ಮೃತ ದೇಹ ಇರುವ ಮತ್ತು ಆರೋಪಿ ಬಾಲಕಿಯನ್ನು ಎತ್ತುಕೊಂಡು ಹೋಗುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಹುಬ್ಬಳ್ಳಿ ಜನರ ಆಕ್ರೋಶ ಭುಗಿಲೆದ್ದಿತ್ತು.. ಅಶೋಕನಗರ ಪೊಲೀಸ್ ಠಾಣೆ ಎದರು ಜನ ಹೋರಾಟಕ್ಕೆ ಮುಂದಾದರು..
ಆರೋಪಿ ಎನ್‌ಕೌಂಟರ್ : ಬಾಲಕಿ ಕೊಲೆ ಪ್ರಕರಣದಲ್ಲಿ ಎಸ್ಕೇಪ್ ಆಗಿದ್ದ ಆರೋಪಿ ರಕ್ಷಿತ ಕ್ರಾಂತಿಯನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆನೇ ಹಲ್ಲೆ ಮಾಡಿದ್ದಾನೆ. ಇದರಿಂದ ಪ್ರಾಣ ರಕ್ಷಣೆಗಾಗಿ ಹಂತಕನಿಗೆ ಗುಂಡು ಹೊಡೆಯಬೇಕಾಗಿ ಬಂತು.. ಈ ವೇಳೆ ಆರೋಪಿ ಎದೆಗೆ ಗುಂಡು ತಾಗಿದ ಪರಿಣಾಮ ಸಾವನ್ನಪ್ಪಿದ್ದಾನೆ.. ಘಟನೆಯಲ್ಲಿ ಓರ್ವ ಪಿಎಸ್‌ಐ, ಇಬ್ಬರೂ ಸಿಬ್ಬಂದಿಗಳಿಗೆ ಗಾಯವಾಗಿದೆ.. ಹಲ್ಲೆಗೊಳಗಾದ ಪೊಲೀಸರನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ..