ಹುಬ್ಬಳ್ಳಿ : ಇತಿಹಾಸದಲ್ಲೇ ದೊಡ್ಡ ಅಕ್ಕಿ ದಂಧೆಯ ಬೆನ್ನು ಬಿದ್ದಿದ್ದ ಹುಬ್ಬಳ್ಳಿ ಪೋಲೀಸರು ಪಿಸ್ತೂಲ ಬಾಬಾನ ಅಕ್ಕಿ ದಂಧೆಯ ಕೋಟೆಯನ್ನು ಛಿದ್ರ-ಛಿದ್ರ ಮಾಡಿದ್ದಾರೆ. ಅಕ್ಕಿ ಕಿಂಗ್ ಪಿನ್ ಸಚಿನ್ ಕಬ್ಬೂರ ಆರೆಸ್ಟ್ ಆಗಿದ್ದು ಮೂರು ದಿನದಿಂದ ಜೈಲಿನಲ್ಲಿ ಪಿಸ್ತೂಲ್ ಬಾಬಾ ಕಂಬಿ ಎಣಿಸುತ್ತಿದ್ದಾನೆ.



ಹುಬ್ಬಳ್ಳಿಯಿಂದ ಹಾವೇರಿಗೆ ಹೋಗಿ ಹುಬ್ಬಳ್ಳಿ ಬೆಂಡಿಗೇರಿ ಪೋಲೀಸರು ನಾಕಾಬಂದಿ ಹಾಕಿದ್ದು ನಾಲ್ಕೂ ದಿಕ್ಕುಗಳಿಂದ ಖಡಕ್ ಇನಸ್ಪೆಕ್ಟರ್ ನಾಯಕ ರವರು ಕೋಟ್ಯಾಧಿಪತಿಯ ಜನ್ಮ ಜಾಲಾಡಿದ್ದಾರೆ. ಇನ್ಸ್ಪೆಕ್ಟರ್ ನಾಯಕಗೆಪಿಎಸ್ ಆಯ್ ರವಿ ವಡ್ಡರವರು ಸಾಥ್ ಕೊಟ್ಟಿದ್ದು ಒಂದಲ್ಲಾಎರಡಲ್ಲಾ ಬರೋಬ್ಬರಿ ಹತ್ತು ಗಾಡಿಗಳನ್ನು ಇನ್ಸ್ಪೆಕ್ಟರ್ ನಾಯಕ ರವರ ಟೀಮ್ ಸೀಜ್ ಮಾಡಿದ್ದಾರೆ.ಜೊತೆಗೆ ಪಿಸ್ತೂಲ ಬಾಬಾನ ಒಂಬತ್ತು ಸಹಚರರನ್ನುಬಂಧಿಸಿದ್ದಾರೆ.