Thursday, November 6, 2025
Flats for sale
Homeರಾಜ್ಯಹುಬ್ಬಳ್ಳಿ : ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ,ಆರ್​ ಅಶೋಕ್‌ ಸೇರಿ ಬಿಜೆಪಿಯ 43 ಮುಖಂಡರ...

ಹುಬ್ಬಳ್ಳಿ : ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ,ಆರ್​ ಅಶೋಕ್‌ ಸೇರಿ ಬಿಜೆಪಿಯ 43 ಮುಖಂಡರ ವಿರುದ್ಧ ದೂರು.

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರಕಾರ ಹಳೆಯ ಕೇಸುಗಳನ್ನು ಮತ್ತೆ ವಿಚಾರಣೆ ನಡೆಸಿದ ಕಾರಣ ರಾಜ್ಯದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಮನಹೋಲಿಕೆಗಾಗಿ ಈ ಕಾರ್ಯ ನಡೆಸುತ್ತಿದೆ ಎಂಬುದು ಹಿಂದೂ ಕಾರ್ಯಕರ್ತರ ಮಾತು .

ಆರೋಪಿ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷನಾಯಕ ಆರ್​​. ಅಶೋಕ್‌ ಉಪನಾಯಕ ಅರವಿಂದ ಬೆಲ್ಲದ್​, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಬಿಜೆಪಿಯ 43 ಮುಖಂಡರ ವಿರುದ್ಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಿಯೋಗದಿಂದ ದೂರು ನೀಡಲಾಗಿದೆ. ಸಿಎಂರ ಜಾತಿ ನಿಂದಿಸಿ ಸಿದ್ರಾಮುಲ್ಲಾಖಾನ್, ಲುಚ್ಚಾ, ಹೇಡಿ ಎಂದಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗದಿಂದ ದೂರು ನೀಡಲಾಗಿದ್ದು ,ನಿನ್ನೆ ಶಹರ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು, ಈ ವೇಳೆ ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಪ್ ಹಳ್ಳೂರ ಪ್ರತಿಕ್ರಿಯೆ ನೀಡಿದ್ದು, ಹುಬ್ಬಳ್ಳಿಯಲ್ಲಿ ಬಿಜೆಪಿಯವರು ಭಯದ ವಾತಾವರಣ ಉಂಟು‌ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆರ್. ಅಶೋಕ ಅವರು ಹಿರಿಯ ನಾಯಕರಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕದಿರೋದಕ್ಕೆ ನಮ್ಮ ವಿರೋಧ ಇದೆ. ಅವರು ವ್ಯಾಪರಸ್ಥರಿಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಅವರ ವಿರುದ್ದ ದೂರು ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಕಚೇರಿ ಮೇಲೆ ಹಾಕಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಬ್ಯಾನರ್ ಚಾಕುವಿನಿಂದ ಹರಿದು ಹಾಕಿದ್ದಾರೆ,ಶ್ರೀಕಾಂತ್ ಪೂಜಾರಿಯನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಬಾರದು. ಶ್ರೀಕಾಂತ್ ಪೂಜಾರಿ ಅಕ್ರಮ ಸರಾಯಿ ಮಾರಾಟ ಮಾಡಿದ್ದಾನೆ. ಇವರೆಲ್ಲ ಅವರಿಗೆ ಸಪೋರ್ಟ್ ಮಾಡಿದ್ದಾರೆ. ಇವರೆಲ್ಲ ಡೋಂಗಿ ರಾಮ ಭಕ್ತರು ಎಂದು ಕಿಡಿಕಾರಿದ್ದಾರೆ,ಅವರ ವಿರುದ್ದವೂ ಹಳೇ‌ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular