ಹಾಸನ : ಮಕ್ಕಳಿಲ್ಲದೆ ಕೊರಗುವ ಜನ ಮುಂದೆ ಹೆಣ್ಣುಮಗುವೆಂದು ಪ್ಲಾಸ್ಟಿಕ್ ಕವರ್‌ನಲ್ಲಿ ಚರಂಡಿಗೆ ಎಸೆದ ಘಟನೆ ಹಾಸನ ಜಿಲ್ಲೆಯ ಹೇಮಾವತಿನಗರದ ಬಳಿ ನಡೆದಿದೆ.
ವರದಿಯ ಪ್ರಕಾರ ಆಗ ತಾನೇ ಹುಟ್ಟಿದ ಮಗುವನ್ನ ಕಟುಕರು ಚರಂಡಿಗೆ ಎಸೆದಿದ್ದು,ನವಜಾತ ಶಿಶುವನ್ನ ಚರಂಡಿಗೆ ಬಿಸಾಡಿ ಹೋಗಿರುವ ನಿರ್ದಯಿ ತಾಯಿಯ ಬಗ್ಗೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ಕಸದ ಜೊತೆ ತುಂಬಿ ನೀಚರು ಮಗುವನ್ನ ಎಸೆದು ಹೋಗಿದ್ದು ಹುಸಿರುಗಟ್ಟಿ ಮಗು ಮೃತಪಟ್ಟಿದೆಂದು ತಿಳಿದಿದೆ. ಮೃತಪಟ್ಟಿರುವ ಶಿಶು ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು ಚರಂಡಯಲ್ಲಿ ಸತ್ತು ಬಿದ್ದಿರುವ ಮಗು ಕಂಡು ಸ್ಥಳೀಯರು ಮರುಗಿದ್ದಾರೆ. ಹಾಸನ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.