ಹಾಸನ ; ಹಾಸನದಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಂಟ್ ಪಂದ್ಯಾಟ ನಡೆಯುತ್ತಿದ್ದು, ಎರಡು ದಿನಗಳ ಈ ಪಂದ್ಯಾಟ ಇಂದು ಮುಂಜಾನೆಯಿಂದ ಆರಂಭಗೊಂಡಿದೆ. ಮುಂಜಾನೆ 8 ಗಂಟೆಯಿಂದ ಲೀಗ್ ಹಂತದ ಪಂದ್ಯಾಟಗಳು ಆರಂಭಗೊಂಡಿದ್ದು, ಮೂರು ಮೈದಾನದಲ್ಲಿ ಮುಂದಿನ ಹಂತಕ್ಕಾಗಿ ತಂಡಗಳು ಸೆಣೆಸಾಡಿದೆ.
ಮಂಗಳೂರು ಜಿಲ್ಲಾ ಪತ್ರಕರ್ತರ ಸಂಘ ಹಾಸನ ಬುಲ್ಸ್ ತಂಡದ ಎದರು ಸುಲಭ ಜಯಗಳಿಸುವ ಮೂಲಕ ಮೊದಲ ಪಂದ್ಯ ಗೆದ್ದುಕೊಂಡಿದೆ. ಮದ್ಯಾಹ್ನ ಊಟದ ಬಳಿಕ ಪಂದ್ಯಾಟ ಆರಂಭವಾಗುತ್ತಿದ್ದಂತೆ ಜೋರಾಗಿ ಗಾಳಿ ಮಳೆ ಆರಂಭವಾಗಿದ್ದು, ಪಂದ್ಯಾಟಕ್ಕೆ ವಿಘ್ನ ತಂದಿದೆ.
ಮೈದಾನದಲ್ಲಿ ಹಾಕಿದ್ದ ಪೆಂಡಾಲ್ ಗಳು ಗಾಳಿಗೆ ಸಿಲುಕಿ ಹಾರಿ ಹೋಗಿದ್ದು, ಮೈದಾನದ ತುಂಬೆಲ್ಲಾ ನೀರು ತುಂಬಿಕೊಂಡಿದೆ. ರಾಜ್ಯದ ಒಟ್ಟು 24 ತಂಡಗಳು ಈ ರಾಜ್ಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದು ಶನಿವಾರ ಮತ್ತು ಭಾನುವಾರ ಪಂದ್ಯಾಟ ಆಯೋಜನೆ ಮಾಡಲಾಗಿತ್ತು. ಹಾಸನ ನಗರದ ಸಾಲಗಾಮೆ ರಸ್ತೆಯ ಸರ್ಕಾರಿ ಕಲಾ ಕಾಲೇಜು , ವಿಜ್ಞಾನ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಮಳೆಯ ಕಾರಣದಿಂದ ಮಧ್ಯಾಹ್ನದ ಬಳಿಕ ನಡೆಯಬೇಕಾಗಿದ್ದ ಎಲ್ಲಾ ಪಂದ್ಯಗಳು ರದ್ದಾಗಿದೆ.