ಹಾಸನ : ಹಣದ ಜೊತೆ ಎಟಿಎಂ ಮಿಷನ್‌ನನ್ನು ಕಳ್ಳರು ಕದ್ದೊಯ್ದ ಘಟನೆ ಹಾಸನ ಜಿಲ್ಲೆಯ ಹೊರವಲಯದ ಹನುಮಂತಪುರದಲ್ಲಿ ನಡೆದಿದೆ.

ಜನಸಂದಣೆ ಪ್ರದೇಶದಲ್ಲೇ ಇರುವ ಎಟಿಎಂ ಇದಾಗಿದ್ದು ಎಟಿಎಂನಲ್ಲಿದ್ದ ಲಕ್ಷಾಂತರ ರೂ ಹಣದ ಜೊತೆ ಎಟಿಎಮ್ ಮಿಷನ್ ನನ್ನು ಕಳ್ಳತನ ಮಾಡಿದ್ದಾರೆ.
ಇಂಡಿಯಾ ಒನ್ ಎಟಿಎಂ ಮಿಷನ್ ಇದಾಗಿದ್ದು ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ಎಟಿಎಂ ಮಿಷನ್ ಎಂದು ತಿಳಿದಿದೆ. ಇಂದು ಬೆಳಿಗ್ಗೆ ಹಣದ ಸಮೇತ ಮಿಷನ್‌ನನ್ನು ಚೋರರು ಕದ್ದೊಯ್ದಿದ್ದು,ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸಿದ್ದು,ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.