Sunday, March 15, 2026
Flats for sale
Homeರಾಜ್ಯಹಾಸನ : ಸಂತ್ರಸ್ತ ಮಹಿಳೆಯನ್ನ HD ರೇವಣ್ಣ ನಿವಾಸಕ್ಕೆ ಕರೆದೊಯ್ದ ಎಸ್ಐಟಿ ತಂಡ.

ಹಾಸನ : ಸಂತ್ರಸ್ತ ಮಹಿಳೆಯನ್ನ HD ರೇವಣ್ಣ ನಿವಾಸಕ್ಕೆ ಕರೆದೊಯ್ದ ಎಸ್ಐಟಿ ತಂಡ.

ಹಾಸನ : ಅಪ್ಪ ಮಾಡಿದ ಕರ್ಮ ಮಕ್ಕಳು ಅನುಭಸಿದಂತೆ ಮಗ ಮಾಡಿದ ಅಪ್ಪನು ತಗಲಾಕೊಂಡಿದ್ದು ಚರಿತ್ರೆಯಲ್ಲೇ ಮೊದಲ ಬಾರಿ ಎಂದು ತಿಳಿಯಬಹುದು. ಸಂತ್ರಸ್ತ ಮಹಿಳೆಯನ್ನು ಪೊಲೀಸರು ಮನೆಯೊಳಗೆ ಅಡುಗೆ ಮನೆ, ಬೆಡ್ ರೂಂ ಹಾಗೂ ಸ್ಟೋರ್‌ರೂಂನಲ್ಲಿ ಮಹಜರ್ ನಡೆಸಿದ್ದಾರೆ.

ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ ಈ ಮೂರು ಕಡೆ ದೌರ್ಜನ್ಯ ನಡೆಸಿದ್ದ ಬಗ್ಗೆ ಆರೋಪ ಮಾಡಿರುವ ಸಂತ್ರಸ್ಥೆ ಹಾಗಾಗಿ ಮನೆಯೊಳಗೆ ವಿವಿಧ ಕಡೆ ಸಂತ್ರಸ್ತ ಮಹಿಳೆಯಿಂದ ಮಾಹಿತಿ ಪಡೆದು ಪೊಲೀಸರು ಸ್ಥಳ ಮಹಜರ್ ನಡೆಸಿದ್ದು ಇದೀಗ HD ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಬಂಧನವಾಗುವುದು ಖಚಿತವಾಗಿದೆ.

ಏತನ್ಮಧ್ಯೆ, ಅವರು ಮೈಸೂರು ಅಪಹರಣ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಕಿಡ್ನ್ಯಾಪಿಂಗ್ ಕೇಸಲ್ಲೂ ಅವರನ್ನು ಬಂಧಿಸಲ್ವಾ ಅಂದಾಗ ಪರಮೇಶ್ವರ್ ಸಹನೆ ಕಳೆದುಕೊಂಡು, ಬಂಧನಗಳು ಆಗುತ್ತೇ ರೀ, ಎಲ್ಲ ವಿವರಗಳನ್ನು ಮಾಧ್ಯಮದವರಿಗೆ ಹೇಳಲಾಗಲ್ಲ ಅಂತ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಎಲ್ಲ ಸಂತ್ರಸ್ತೆಯರು ಮತ್ತು ಅವರಿಗಾಗಿ ಮರುಗುತ್ತಿರುವ ಕನ್ನಡಿಗರು ಅಂದುಕೊಳ್ಳುತ್ತಿರುವುದೇನೆಂದರೆ, ರೇವಣ್ಣ ಮತ್ತು ಪ್ರಜ್ವಲ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸರ್ಕಾರ ಇದೇ ಉಡಾಫೆ ಧೋರಣೆ ಪ್ರದರ್ಶಿಸುತ್ತಿತ್ತೇ?

RELATED ARTICLES

LEAVE A REPLY

Please enter your comment!
Please enter your name here

Most Popular