Friday, November 22, 2024
Flats for sale
Homeಜಿಲ್ಲೆಹಾಸನ ; ಶಿರಾಡಿ ಘಾಟ್​ನಲ್ಲಿ ಮತ್ತೆ ಗುಡ್ಡ ಕುಸಿತ,ಹಲವು ವಾಹನಗಳು ಜಖಂ,ಕೆಲಹೊತ್ತು ಸಂಚಾರ ಬಂದ್.

ಹಾಸನ ; ಶಿರಾಡಿ ಘಾಟ್​ನಲ್ಲಿ ಮತ್ತೆ ಗುಡ್ಡ ಕುಸಿತ,ಹಲವು ವಾಹನಗಳು ಜಖಂ,ಕೆಲಹೊತ್ತು ಸಂಚಾರ ಬಂದ್.

ಹಾಸನ ; ರಾಜ್ಯದಲ್ಲಿ ಸುರಿಯುವ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡಗಾಡುಗಳು ಕುಸಿಯುತ್ತಿವೆ. ಶಿರಾಡಿ ಘಾಟ್​ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತವಾಗಿದೆ. ಇದೀಗ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಗಂಟೆಗಟ್ಟಲೆ ಕಿಲೋಮೀಟರ್​ ತನಕ ವಾಹನಗಳು ಸಾಲುಗಟ್ಟಿ ನಿಂತಿದೆ.

ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಚಲಿಸುತ್ತಿದ್ದ ಕಾರು ,ಲಾರಿ,ಗ್ಯಾಸ್ ಟ್ಯಾಂಕರ್ ಮೇಲೆ ಗುಡ್ಡ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದಿದೆ .ಇಂದು ಮತ್ತೊಮ್ಮೆ ಗುಡ್ಡ ಕುಸಿತದಿಂದ ಶಿರಾಡಿಘಾಟ್​ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಂಚಾರ ದಟ್ಟಣೆ ಆಗುವ ಹಿನ್ನೆಲೆ ಕೆಲಹೊತ್ತು ಸಕಲೇಶಪುರ ಹಾದಿಯಲ್ಲಿ ವಾಹನ ಸವಾರರು ಸಂಚಾರಿಸಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮನವಿಮಾಡಿದ್ದಾರೆ.ಗಂಟೆಗಟ್ಟಲೆ ಸಾಲು ನಿಂತ ವಾಹನಳಿಂದ ರೋಡ್ ಬ್ಲಾಕ್ ಆಗಿದ್ದು ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ದೌಡಹಿಸಿದ್ದು ಮಣ್ಣು ತೆರವು ಮಾಡುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಸುಮಾರು ಆರು ಗಂಟೆಗಳ ಕಾಲ ಸಂಚಾರ ಬಂದ್ ಮಾಡಲಾಗಿದೆ ಅದರಂತೆ ಪುತ್ತೂರು ಸಂಪಾಜೆ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ತೆರವು ಕಾರ್ಯಚರಣೆ ಹಿನ್ನೆಲೆ ಮೂರು ಗಂಟೆಗಳ ಕಾಲ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಉಪ್ಪಿನಂಗಡಿ ಬಳಿ ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಮುಳುಗುವ ಬೀತಿಯಲ್ಲಿದೆ.ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದ್ದು ಪ್ರಸ್ತುತ ಎಲ್ಲಾ ಘಾಟ್ ರಸ್ತೆಗಳು ಬಂದ್ ಆಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular