Thursday, March 12, 2026
Flats for sale
Homeರಾಜ್ಯಹಾಸನ ; ವರುಣನ ರೌದ್ರವತಾರಕ್ಕೆ ಜನಜೀವನ ಅಸ್ತವ್ಯಸ್ತ, ಸಕಲೇಶಪುರದ ಹಲವೆಡೆ ಗುಡ್ಡ ಕುಸಿತ.

ಹಾಸನ ; ವರುಣನ ರೌದ್ರವತಾರಕ್ಕೆ ಜನಜೀವನ ಅಸ್ತವ್ಯಸ್ತ, ಸಕಲೇಶಪುರದ ಹಲವೆಡೆ ಗುಡ್ಡ ಕುಸಿತ.

ಹಾಸನ : ಕಳೆದ ಒಂದು ವಾರದಿಂದ ಸುರಿಯುವ ನಿರಂತರ ಜಡಿ ಮಳೆಯಿಂದಾಗಿ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹಲವು ಸಾವುನೋವು ಸಂಭವಿಸಿದ ವರದಿಯಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ಎತ್ತಿನಹಳ್ಳ ಬಳಿ ಘಟನೆ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗೊಂಡ ಘಟನೆ ನಡೆದಿದೆ.

ಭೂಕುಸಿತದಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು ಶಿರಾಡಿ ಘಾಟಿಯಲ್ಲಿ ವಾನಹಗಳ ಸಂಚಾರ ದಲ್ಲಿ ಬದಲಾವಣೆಯಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಸಕಲೇಶಪುರ ಭಾಗದ ಅನೇಕ ಕಡೆಗಳಲ್ಲಿ ಗುಡ್ಡ ಕುಸಿದಿದೆ.

ಬೆಳಗಾವಿಯ ಖಾನಾಪುರದ ಕಣಕುಂಬಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ನದಿ ತೀರದ ರೈತರಲ್ಲಿ ಆತಂಕ ಹೆಚ್ಚಿದ್ದು, ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಆತಂಕವಿದೆ. ಇತ್ತ ಪಾರಿಶ್ವಾಡ ಹಾಗೂ ಹಿರೇಮುನವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ದುರಸ್ಥಿತಿಗೆ ಆಗ್ರಹಿಸಿದ್ದಾರೆ.

ನಿರಂತರ ಮಳೆ ಬೃಹತ್ ಗಾತ್ರದ ಬಂಡೆಗಲ್ಲು ರಸ್ತೆಗೆ ಉರುಳಿ ಬಿದ್ದಿದೆ. ಬೆಳಗಾವಿ ಅಂಬೋಲಿ‌ ಮಾರ್ಗ ಮಧ್ಯೆ ಹೆದ್ದಾರಿಗೆ ಬಂಡೆಗಲ್ಲು ಉರುಳಿದೆ. ಗೋವಾ, ಕರ್ನಾಟಕ, ಮಹಾರಾಷ್ಟ್ರ ಬೆಸೆಯುವ ಅಂಬೋಲಿ ಸಾವಂತವಾಡಿ ಹೆದ್ದಾರಿ ಇದಾಗಿದ್ದು, ಅದೃಷ್ಟವಷಾತ್ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಬೆಳಗ್ಗಿನಿಂದಲೇ ಬಂಡೆಗಲ್ಲು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಮಹಾರಾಷ್ಟ್ರ ಲೋಕೋಪಯೋಗಿ ಹಾಗೂ ಪೊಲೀಸರ ನೇತೃತ್ವದಲ್ಲಿ ಬಂಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular