ಹಾಸನ : ಸಕಲೇಶಪುರದ ಉಪ ವಿಭಾಗಾಧಿಕಾರಿಗಳ ಕಚೇರಿಯ ಪೀಠೋಪಕರಣಗಳು ಜಪ್ತಿಯಾದ ಘಟನೆ ವರದಿಯಾಗಿದೆ.


ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ಎಂ.ಎಸ್. ಶಶಿಕಲಾ ಆದೇಶ ಹೊರಡಿಸಿದ್ದು ಲ್ಯಾಂಡ್ ಅಕ್ವಿಜಿಶನ್ ಕೇಸ್ ನಲ್ಲಿ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ನಿಡುವಲ್ಲಿ ವಿಳಂಬ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದಿದೆ.
ಜಾರಿ ನಿರ್ದೇಶನಾಲಯದ ಆದೇಶದ ಮೇರೆಗೆ ಕಚೇರಿಯ ಪೀಠೋಪಕರಣಗಳು ಜಪ್ತಿಪಡಿಸಿದ್ದು ಕೋರ್ಟ್ ಜಪ್ತಿ ಅಧಿಕಾರಿಗಳಾದ ಕೃಷ್ಣ.ಎನ್ ಹಾಗೂ ಆದೇಶ ಜಾರಿಕಾರರಾದ ಚೌಡಪ್ಪನವರ ಸಮ್ಮುಖದಲ್ಲಿ ಕಚೇರಿಯ ಪಿಟೋಪಕರಣಗಳು,ಕಂಪ್ಯೂಟರ್, ಬ್ಯಾಟರಿ ಹಾಗೂ ಇನ್ನಿತರ ವಸ್ತುಗಳು ಜಪ್ತಿಮಾಡಿದ್ದಾರೆಂದು ಮಾಹಿತಿ ದೊರೆತಿದೆ.