ಹಾಸನ : ಸಾಮಾಜಿಕಜಾಲತಾಣದಲ್ಲಿ ರೀಲ್ಸ್‌ಗಾಗಿ ವಿದ್ಯಾರ್ಥಿಗಳು ಪೆಟ್ರೋಲ್ ಬಾಂಬ್ ಸ್ಪೋಟಿಸಿ ಹುಚ್ಚಾಟ ಪ್ರದರ್ಶನ ನಡೆಸಿ ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ ಘಟನೆ ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

ರಾಜೀವ್ ಆರ್ಯುವೇದ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಈ ದುಸ್ಸಾಹಸ ಮಾಡಿದ್ದು ಹಾಸನ ನಗರದ ಇಬ್ಬರು ಹಾಗೂ ಕುಣಿಗಲ್ ತಾಲ್ಲೂಕಿನ ಓರ್ವ ವಿದ್ಯಾರ್ಥಿಯಿಂದ ಈ ಹುಚ್ಚಾಟ ನಡೆಸಿ ಪೋಲೀಸರ ಪಾಲಾಗಿದ್ದಾರೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ (HPCL) ಸಮೀಪವೇ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ಕವರ್‌ಗೆ ಪೆಟ್ರೋಲ್ ತುಂಬಿ, ಅದರ ಮೇಲೆ ಆಟಂಬಾಂಬ್ ಇಟ್ಟು ಬೆಂಕಿ ಹಚ್ಚಿ ಬಾರಿ ಪ್ರಮಾಣದಲ್ಲಿ ಪೆಟ್ರೋಲ್ ಬಾಂಬ್ ಸ್ಟೋಟಗೊಂಡ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಪೆಟ್ರೋಲ್ ಬಾಂಬ್ ಸ್ಪೋಟಗೊಂಡ ಅನತಿ ದೂರದಲ್ಲಿ ಪೆಟ್ರೋಲ್ ಟ್ಯಾಂಕರ್ ನಿಂತಿದ್ದು ಇವರ ಹುಚ್ಚಾಟದಿಂದ ಬಾರಿ ದೊಡ್ಡ ಅನಾಹುತ ತಪ್ಪಿದೆ.
ಪೆಟ್ರೋಲ್ ಬಾಂಬ್ ಸ್ಪೋಟಿಸಿರುವ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗಿದ್ದು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಮೂವರನ್ನು ಕೋರ್ಟ್‌ಗೆ ಹಾಜರುಪಡಿಸಿ ದಂಡ ವಿಧಿಸಿದ್ದಾರೆ.


