ಹಾಸನ : ಮೆಕ್ಕೆಜೋಳ ಕಟಾವು ವೇಳೆ ಕೊಳಕು ಮಂಡಲದ ಹಾವು ಕಡಿದ ಹಿನ್ನೆಲೆ ಕಡಿತಕ್ಕೊಳಗಾದ ವ್ಯಕ್ತಿ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಹಾವಿನ ಸಮೇತ ಆಸ್ಪತ್ರೆಗೆ ಬಂದ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಾರೋಹಳ್ಳಿ ಗಡಿ ಬಳಿ ನಡೆದಿದೆ.
ಹಾವೇರಿ ಮೂಲದ ಮುತ್ತು (40) ಹಾವಿನಿಂದ ಕಡಿತಕ್ಕೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಹಾವೇರಿಯಿಂದ ಮೆಕ್ಕೆಜೋಳ ಕಟಾವಿಗೆ ಮುತ್ತು ಬಂದಿದ್ದು ಹೊಲದಲ್ಲಿ ಮೆಕ್ಕೆಜೋಳ ಕಟಾವು ಮಾಡುವಾಗ ಕೊಳಕು ಮಂಡಲದ ಹಾವು ಕಚ್ಚಿದೆ, ಕೂಡಲೇ ಹಾವನ್ನು ಹಿಡಿದುಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾರೆ.
ಬೇಲೂರು ಆಸ್ಪತ್ರೆಯಲ್ಲಿ ಕಡಿತಕ್ಕೊಳಗಾದ ಮುತ್ತು ಚಿಕಿತ್ಸೆ ಪಡೆಯುತ್ತಿದ್ದು ಹಾವು ಹಿಡಿದುಕೊಂಡು ಬಂದಿದ್ದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಮುತ್ತುವಿಗೆ ಚಿಕಿತ್ಸೆ ಡಾ.ಸುಧಾ ರವರು ನೀಡಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದಾರೆ .