ಹಾಸನ : ಅಕ್ರಮ ಬಾಂಗ್ಲಾ ವಲಸಿಗರಿಗೆ ಹಣಕ್ಕಾಗಿ ಜನ್ಮದಿನಾಂಕವನ್ನು ಆಧಾರ್ ಲಿಂಕ್ ಗೆ ಸೇರಿಸುತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು ಆಕೆಯ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಕಳೆದ ಎರಡುವರೆ ವರ್ಷದಿಂದ ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ, ನಕಲಿ ಜನ್ಮದಿನಾಂಕ ಸೃಷ್ಟಿಸಲು ಖಾಸಗಿ ಇಂಟರ್ ಪಾರ್ಲರ್ ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾಳೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್ ಗೆ ಲಿಂಕ್ ಮಾಡಿ ಒಬ್ಬರಿಂದ 5 ಸಾವಿರದಿಂದ 10 ಸಾವಿರದ ವರೆಗೂ ಹಣ ಗಿಟ್ಟಿಸಿಕೊಳ್ಳುತ್ತಿದ್ದಳು.
ಈ ಬಗ್ಗೆ ವಿಚಾರ ತಿಳಿದ ಬೆಂಗಳೂರಿಗೆ ವಿಷಯ ಮುಟ್ಟಿಸಿದ್ದು ಈ ಬಗ್ಗೆ ಪರಿಶೀಲನೆ ಮಾಡಲು ಬಂದಿದ್ದ ಅಧಿಕಾರಿ ವಿಜಯ್ ಕುಮಾರ್ ರವರಿಗೆ ಅನುಶ್ರೀ ಐಡಿ ಯಿಂದ ಇಲ್ಲಿ ನಕಲಿ ಮಾಡುವ ಮಾಹಿತಿ ಬೆಳೆಕಿಗೆ ಬಂದಿದೆ.ಅನುಶ್ರೀಯನ್ನು ಕಚೇರಿಗೆ ಕರೆಸಿ ವಿಚಾರಿಸಿದ ಜಿಲ್ಲಾಧಿಕಾರಿ ಸತ್ಯಭಾಮ ನಮ್ಮಲ್ಲಿ ಇಂತಹ ಘಟನೆ ನಡೆಯುವುದು ಬೇಸರದ ವಿಚಾರಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಕೆಯ ಕೆಲಸದ ಅವಧಿಯ 2.5 ವರ್ಷದ ದಾಖಲೆಯನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು ಕೂಡಲೇ ಈಕೆಯ ಮೇಲೆ FIR ದಾಖಲಿಸಿ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.