ಹಾಸನ : ಸುಮಾರು ಹದಿನೈದಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ದುರುಳರು ವಿಷವಿಟ್ಟು ಕೊಂದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಾದಿಗೆ ಗ್ರಾಮದಲ್ಲಿ ನಡೆದಿದೆ.
ಅಲ್ಪಸ್ವಲ್ಪ ಆದಾಯಕ್ಕಾಗಿ ಬಡ ಕೂಲಿ ಕಾರ್ಮಿಕರು ಸಾಕಿದ್ದ ನಾಟಿ ಕೋಳಿಗಳನ್ನು ಸಾಕಿದ್ದು ಗ್ರಾಮದ ರವಿ ಹಾಗೂ ಇತರರಿಗೆ ಈ ಕೋಳಿ ಸೇರಿದ್ದಾಗಿದೆ. ಕೋಳಿಯನ್ನು ಹೊರಗೆ ಬಿಟ್ಟು ಕೆಲಸಕ್ಕೆ ಕಾರ್ಮಿಕರು ತೆರಳಿದ್ದು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ನಾಟಿ ಕೋಳಿಗಳು ಸತ್ತು ಬಿದ್ದಿದೆ.
ಸಾಮೂಹಿಕವಾಗಿ ನಾಟಿ ಕೋಳಿಗಳನ್ನು ಕೀಚಕರು ಕೊಂದಿದ್ದು,ಕೋಳಿಗಳಿಗೆ ವಿಷ ಹಾಕಿ ಕೊಂದವರ ವಿರುದ್ಧ ಬಡ ಕುಟುಂಬಗಳು ಆಕ್ರೋಶ ಹೊರಹಾಕಿದ್ದಾರೆ. ಸತ್ತ ಒಂದು ಕೋಳಿಯ ಬಾಯಿಂದ ಬೆಂಕಿ ಹಾಗೂ ಹೊಗೆ ಬರುತ್ತಿರುವುದನ್ನು ಕಂಡು ಸ್ಥಳೀಯರು ಆಶ್ವರ್ಯಗೊಂಡಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.