ಹಾಸನ : ಜಿಲ್ಲೆಯ ಸಕಲೇಶಪುರ ಪಟ್ಟಣದ, ಆಜಾದ್ ರಸ್ತೆಯಲ್ಲಿಅಪರೂಪದ ಅಟ್ಲಾಸ್ ಪತಂಗ ಕಾಣಿಸಿಕೊಂಡಿದೆ. ಬದ್ರಿಯಾ ಜುಮಾ ಮಸ್ಜಿದ್ ಆವರಣದಲ್ಲಿ ಅಟ್ಲಾಸ್ ಪತಂಗ ಜನರ ಕಣ್ಣಿಗೆ ಬಿದ್ದಿದ್ದು ದಟ್ಟ ಅರಣ್ಯದಲ್ಲಿ ಕಾಣ ಸಿಗುವ ಅಪರೂಪದ ಅಟ್ಲಾಸ್ ಪತಂಗ ಇದಾಗಿದೆ.

ಅಪರೂಪದ ಪತಂಗ ಕಂಡು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದು ಅರಣ್ಯದಲ್ಲಿ ಪ್ರತ್ಯಕ್ಷವಾಗುವ ವಿಶೇಷ ಪ್ರಭೇದದ ಚಿಟ್ಟೆ ಪಶ್ಚಿಮಘಟ್ಟ ಅರಣ್ಯದಲ್ಲಿ ಕಂಡು ಬರುವ ಚಿಟ್ಟೆಗಿಂತ ಗಾತ್ರದಲ್ಲಿ ದೊಡ್ಡದಾದ ಅಪರೂಪದ ಪತಂಗವಾಗಿದೆ.ನೋಡಲು ಎರಡು ತಲೆ ಹಾವಿನಂತೆ ಕಾಣುತಿದ್ದು ದಟ್ಟ ಅರಣ್ಯದಲ್ಲೇ ವಾಸವಿರುವ ಈ ಪತಂಗ ಅರಣ್ಯ ಬಿಟ್ಟು ಸೂಕ್ಷ್ಮ ಪ್ರಭೇದದ ಕೀಟವಾಗಿರುವ ಅಟ್ಲಾಸ್ ಪತಂಗ ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ.


