Monday, March 3, 2025
Flats for sale
Homeಜಿಲ್ಲೆಹಾಸನ : ಗದ್ದೆಯಲ್ಲಿ ಫಸಲಿಗೆ ಬಂದಿದ್ದ ಭತ್ತದ ಬೆಳೆ ನಾಶಪಡಿಸಿದ ಕಾಡಾನೆ..!

ಹಾಸನ : ಗದ್ದೆಯಲ್ಲಿ ಫಸಲಿಗೆ ಬಂದಿದ್ದ ಭತ್ತದ ಬೆಳೆ ನಾಶಪಡಿಸಿದ ಕಾಡಾನೆ..!

ಬೇಲೂರು : ಹಾಸನ: ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು ಗದ್ದೆಯಲ್ಲಿ ಕಟಾವು ಮಾಡಿದ್ದ ಅಪಾರ ಪ್ರಮಾಣದ ಭತ್ತದ ಫಸಲನ್ನು ಒಂಟಿ ಸಲಗ ತಿಂದು ಹಾನಿ ಮಾಡಿರುವ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಇರಕರವಳ್ಳಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಭತ್ತ ಕಟಾವು ಮಾಡಿದ್ದ ರೈತರು ಭತ್ತ ಸಾಗಿಸಲು ಸಿದ್ಧತೆ ನಡೆಸಿದ್ದರು. ಈ ನಡುವೆ ಗದ್ದೆಗೆ ಎಂಟ್ರಿ ಕೊಟ್ಟ ದೈತ್ಯ ಕಾಡಾನೆ ವಿಶಾಲವಾದ ಗದ್ದೆಯಲ್ಲಿ ಹಾಕಲಾಗಿದ್ದ ಭತ್ತದ ಫಸಲನ್ನು ಮೈ ಮೇಲೆ ಎಸೆದುಕೊಂಡು ಗದ್ದೆಯಲ್ಲೆಲ್ಲಾ ಓಡಾಡಿ ಸಾಕಷ್ಟು ಭತ್ತವನ್ನು ತಿಂದು ಹಾನಿ ಮಾಡಿದೆ. ಗದ್ದೆಯಲ್ಲಿ ಕಾಡಾನೆಯನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದು ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆಯನ್ನು ತಿಂದು, ಪಕ್ಕದಲ್ಲಿಯೇ ಕಾಫಿ ತೋಟದಲ್ಲಿ ಬೀಡು ಬಿಟ್ಟಿದೆ.

ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular