Thursday, March 12, 2026
Flats for sale
Homeಕ್ರೈಂಹಾಸನ : ಕೋಳಿಯನ್ನು ಕೊಂದಿದ್ದಕ್ಕೆ ನಾಯಿಯನ್ನು ಹೊಡೆದು ಸಾಯಿಸಿದ ಭೂಪ.

ಹಾಸನ : ಕೋಳಿಯನ್ನು ಕೊಂದಿದ್ದಕ್ಕೆ ನಾಯಿಯನ್ನು ಹೊಡೆದು ಸಾಯಿಸಿದ ಭೂಪ.

ಹಾಸನ : ಕೋಳಿಯನ್ನು ಕೊಂದಿದ್ದಕ್ಕೆ ನಾಯಿಯನ್ನು ಹೊಡೆದು ಸಾಯಿಸಿದ ಭೂಪ.

ಬುಧವಾರ ನಗರದ ಹೊರವಲಯದ ಕೆಂಚಹಳ್ಳಿಯಲ್ಲಿ ಕೋಳಿಯನ್ನು ಕೊಂದಿದ್ದಕ್ಕೆ ವ್ಯಕ್ತಿಯೊಬ್ಬ ನಾಯಿಯನ್ನು ಪಾದಚಾರಿ ಮಾರ್ಗದ ಕರ್ಬ್ ಕಲ್ಲಿಗೆ ಹೊಡೆದು ರಸ್ತೆಯಲ್ಲಿ ಎಳೆದೊಯ್ದು ಕೊಂದಿದ್ದಾನೆ.

ಈ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಂಚಹಳ್ಳಿಯ ಎಚ್‌ಕೆಎಸ್ ಶಾಲೆಯ ಬಳಿ ಘಟನೆ ನಡೆದಿದೆ. ಬೀದಿ ನಾಯಿಯನ್ನು ಹಿಡಿದು ಅದರ ಕಾಲುಗಳನ್ನು ಕಟ್ಟಿ ದಂಡೆಯ ಕಲ್ಲಿಗೆ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಈತನ ಅಮಾನವೀಯ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದರು. ಅಮಾನವೀಯ ಕೃತ್ಯ ಎಸಗಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ. ವ್ಯಕ್ತಿಯ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular