Saturday, November 23, 2024
Flats for sale
Homeರಾಜ್ಯಹಾಸನ : ಕಾಫಿ ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕಾದು ಕುಳಿತ ಕಾಡಾನೆ,ಕೂದಲೆಳೆ ಅಂತರದಲ್ಲಿ ಪಾರು.

ಹಾಸನ : ಕಾಫಿ ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕಾದು ಕುಳಿತ ಕಾಡಾನೆ,ಕೂದಲೆಳೆ ಅಂತರದಲ್ಲಿ ಪಾರು.

ಹಾಸನ : ಬೆಳಗ್ಗಿನ ಜಾವಾ ಕಾಫಿ ತೋಟಕ್ಕೆ ಹೋದ ಕಾರ್ಮಿಕನ ಮೇಲೆ ಒಂಟಿ ಸಲಗ ಹುಲಿಯಂತೆ ಕಾದು ಕುಳಿತು ವ್ಯಕ್ತಿಯ ಮೇಲೆ ದಾಳಿ ಮಾಡಿದೆ.ಆನೆಯಿಂದ ತಪ್ಪಿಸಿಕೊಂದು ಓಡಿ ಬಂದ ವ್ಯಕ್ತಿ ಮನೆಯ ಬಳಿಯಿದ್ದ ಮೆಟ್ಟಿಲನ್ನೇರಿ ಮನೆಯ ಮೇಲೆ ಹೋಗಿ ಜೀವ ಉಳಿಸಿಕೊಂಡಿದ್ದಾನೆ. ಆದರೆ, ಕಾರ್ಮಿಕ ಪುನಃ ಮೆಟ್ಟಿಲಿನಿಂದ ಇಳಿದು ಬರಬಹುದು ಎಂದು ಮನೆಯ ಮುಂದಿನ ಕಾಫಿ ತೋಟದಲ್ಲಿ ಸುಮಾರು ಹೊತ್ತು ಅಡಗಿ ಕುಳಿತು ಬೇಟೆಗಾಗು ಹುಲಿಯಂತೆ ಹೊಂಚು ಹಾಕಿತ್ತು. ಆನೆಯನ್ನು ಮನೆ ಮೇಲಿನಿಂದ ನೋಡುತ್ತಿದ್ದ ಕಾರ್ಮಿಕ ಆನೆ ಸಂಪೂರ್ಣವಾಗಿ ಹೋಗುವುದನ್ನು ಖಚಿತಪಡಿಸಿಕೊಂಡು ನಂತರ ಕೆಳಗೆ ಬಂದಿದ್ದಾನೆ.

ಈ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕಡೆಗರ್ಜೆ ಗ್ರಾಮದಲ್ಲಿ ನಡೆದಿದೆ.ಅದೃಷ್ಟವಶಾತ್ ಕಾರ್ಮಿಕ ಸರಿಯಾದ ಸಮಯಕ್ಕೆ ಮೆಟ್ಟಿಲೇರಿ ಕುಳಿತ ಪರಿಣಾಮ ಆನೆ ಕಾಡು ಸುಸ್ತಾಗಿ ಕೊನೆಗೂ ಸ್ಥಳದಿಂದ ಕಳಚಿದೆ .

ರಾಜ್ಯದಲ್ಲಿ ಕಾಡಾನೆಗಳು ಹಾಗೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇನ್ನು ರಾಮನಗರ ಹಾಗೂ ಹಾಸನದಲ್ಲಿ ಆನೆಗಳ ದಾಳಿಗೆ ಸಾವನ್ನಪ್ಪುವವರ ಪ್ರಕರಣ ಹೆಚ್ಚಾಗುತ್ತಿವೆ.ತಮ್ಮ ಕಾಫಿ ತೋಟದಲ್ಲಿರುವ ಮನೆಯಿಂದ ಕಾಫಿ ತೋಟಕ್ಕೆ ಹೊರಟ ಮಹೇಶ್‌ಗೌಡ, ಕಾಫಿ ತೋಟದೊಳಗೆ ನಡೆದುಕೊಂಡು ಹೋಗುವಾಗ ಒಂಟಿ ಸಲಗ ಈತನನ್ನು ನೋಡಿ ಅಟ್ಯಾಕ್ ಮಾಡಿದೆ. ಆಗ ಆನೆ ತನ್ನತ್ತ ಧಾವಿಸಿ ಬರುತ್ತಿರುವುದನ್ನು ನೋಡಿದ ಮಹೇಶ್‌ಗೌಡ ಸತ್ನೋ, ಬಿದ್ನೋ ಅಂತಾ ಒಂದೇ ಉಸಿರಲ್ಲಿ ಓಡಿ ಮನೆಯತ್ತ ಬಂದಿದ್ದಾನೆ. ಇನ್ನು ಮನೆಯ ಬಾಗಲು ತೆಗೆದು ಒಳಗೆ ಹೋಗುವುದು ಆಗುವುದಿಲ್ಲವೆಂದು ಮನೆಯ ಬಳಿ ನಿರ್ಮಿಸಿದ್ದ ಕಬ್ಬಿಣದ ಮೆಟ್ಟಿಲುಗಳನ್ನು ಹತ್ತಿಕೊಂಡು ಮನೆಯ ಮೇಲೆ ಹೋಗಲು ಮುಂದಾಗಿದ್ದಾನೆ. ತನ್ನ ಬೇಟೆ ತಪ್ಪಿ ಹೋಯಿತು ಎಂದು ಕುಪಿತಗೊಂಡ ಆನೆ, ಮೆಟ್ಟಿಲನ್ನು ಹತ್ತುವುದಕ್ಕೆ ಸಾಧ್ಯವಿದೆಯೇ ಎಂದು ನೋಡಿದೆ. ಆದರೆ, ಕಬ್ಬಿಣದ ಜಾಲರಿಯಂತಿದ್ದ ಮೆಟ್ಟಿಲನ್ನು ಹತ್ತಲಾಗದೇ ಅಲ್ಲಿಯೇ ಕೆಲಹೊತ್ತು ಕಾದು ನಿಂತಿದೆ. ಮನೆಯ ಮೇಲೆ ಹೋದ ವ್ಯಕ್ತಿ ಮರಳಿ ಬಾರದ ಹಿನ್ನೆಲೆಯಲ್ಲಿ ಆನೆ ಮನೆಯ ಮುಂದೆ ಹೋಗಿ ಜೋರಾಗಿ ಘೀಳಿಡುತ್ತಾ ಅಲ್ಲಿಂದ ಮಣ್ಣನ್ನು ಕಾಲಿನಿಂದ ಕೆದರುತ್ತಾ ಆಕ್ರೋಶ ಹೊರಹಾಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular