ಹಾಸನ : ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರ್ ಮಿತಿಮೀರಿದೆ. ಜನರ ಆರೋಗ್ಯ ಕಾಪಾಡಬೇಕಾದ ಆರೋಗ್ಯ ನಿರೀಕ್ಷಕನೇ ಈಗ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಸರ್ಕಾರಿ ವಾಹನವನ್ನೇ ಬಾರ್ ಮಾಡಿಕೊಂಡ ಅಧಿಕಾರಿಯ ಅಸಲಿ ಬಣ್ಣ ಈಗ ಬಯಲಾಗಿದೆ!
ಹಾಸನದ ರಸ್ತೆಗಳಲ್ಲಿ ಸಾರ್ವಜನಿಕರ ಸೇವೆಗೆ ಓಡಾಡಬೇಕಿದ್ದ ಆ ಸರ್ಕಾರಿ ಜೀಪು, ಇಂದು ಮದ್ಯದ ಮಳಿಗೆಯಂತಾಗಿತ್ತು. ಹೌದು, ಹಾಸನ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್‌ಪೆಕ್ಟರ್ ಪ್ರಸಾದ್ ಎಂಬುವವರು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡು ಅಕ್ಷರಶಃ ‘ಫುಲ್ ಟೈಟ್’ ಆಗಿದ್ದಾರೆ.
ಅಧಿಕಾರಿಯ ಬೇಜವಾಬ್ದಾರಿ ಜನಸಾಮಾನ್ಯರು ಸಾಲು ಸಾಲು ಸಮಸ್ಯೆಗಳನ್ನು ಹೊತ್ತು ಪಾಲಿಕೆಗೆ ಅಲೆಯುತ್ತಿದ್ದರೆ, ಇತ್ತ ಹೆಲ್ತ್ ಇನ್ಸ್‌ಪೆಕ್ಟರ್ ಸಾಹೇಬರು ಮಾತ್ರ ಮದ್ಯದ ಅಮಲಿನಲ್ಲಿ ‘ಗುಡ್ ನೈಟ್’ ಮೂಡ್‌ಗೆ ಜಾರಿದ್ದಾರೆ. ಕರ್ತವ್ಯ ಮರೆತು, ನಿಯಮ ಗಾಳಿಗೆ ತೂರಿ, ಸರ್ಕಾರಿ ಗಾಡಿಯಲ್ಲೇ ಎಣ್ಣೆ ಪಾರ್ಟಿ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.


