ಹಾಸನ ; ಓವರ್ ಟೆಕ್ ಮಾಡುವಾಗ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಎರಡು ಕಾರಿನಲ್ಲಿದ್ದ ಐದು ಮಂದಿಗೆ ಗಾಯಗೊಂಡ ಘಟನೆ
ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಪಾಳ್ಯ ಬಳಿ ನಡೆದಿದೆ.

ಡಿಕ್ಕಿಯಾಗಿ ರಸ್ತೆ ಬದಿಗೆ ಕಾರುಗಳು ಉರುಳಿದ್ದು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎರಡು ಕಾರುಗಳು ಎಂದು ತಿಳಿದಿದೆ.
KA-20-MC-3056 ನಂಬರ್‌ನ ಹೋಂಡಾ ಸಿಟಿ, KA-04-MY-6084 ನಂಬರ್‌ನ ಕಿಯಾ ಕಾರುಗಳ ನಡುವೆ ಅಪಘಾತ ನಡೆದಿದ್ದು ವೇಗವಾಗಿ ಬಂದು ಓವರ್ ಟೆಕ್ ಮಾಡುವಾಗ ಅಪಘಾತ ನಡೆದಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ75 ರಲ್ಲಿ ಈ ಘಟನೆ ನಡೆದಿದ್ದು
ಗಾಯಾಳುಗಳಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.