Thursday, March 12, 2026
Flats for sale
Homeಕ್ರೈಂಹಾಸನ : ಎಸ್ಪಿ ಕಚೇರಿಯ ಆವರಣದಲ್ಲೇ ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ ಪೋಲಿಸ್ ಪೇದೆ...

ಹಾಸನ : ಎಸ್ಪಿ ಕಚೇರಿಯ ಆವರಣದಲ್ಲೇ ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ ಪೋಲಿಸ್ ಪೇದೆ .

ಹಾಸನ ; ಪತ್ನಿಗೆ ಚಾಕುವಿನಿಂದ ಇರಿದ ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆಯ ಎಸ್ಪಿ ಪೊಲೀಸ್ ಕಛೇರಿಯಲ್ಲಿ ನಡೆದಿದೆ. ಚಾಕು ಇರಿತದಿಂದ ಸಾವನ್ನಪ್ಪಿದ ಪೊಲೀಸ್ ಪತ್ನಿಯನ್ನು ಮಮತ ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆಯ ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಿಸಿ ಲೋಕನಾಥ್ ಕೊಲೆ ಆರೋಪಿಯಾಗಿದ್ದು ಚಾಕು ಇರಿತದ ಕೆಲವೇ ಕ್ಷಣಗಳಲ್ಲೇ ಪೋಲಿಸ್ ಪೇದೆಯ ಪತ್ನಿ ಮಮತ ಸಾವನಪ್ಪಿದ್ದಾರೆ. ತೀವ್ರ ರಕ್ತ ಸ್ರಾವವಾಗಿದ್ದ ಬಲಳುತ್ತಿದ್ದ ಪೊಲೀಸ್ ಪತ್ನಿಯನ್ನು ತಕ್ಷಣ ಬೇರೆ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆಂದು ತಿಳಿದುಬಂದಿದೆ.

ಶಾಂತಿಗ್ರಾಮ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಕೆಲಸ ಮಾಡ್ತಿದ್ದ ಲೋಕನಾಥ್ ಕಳೆದ 17 ವರ್ಷಗಳ ಹಿಂದೆ ಮಮತಳನ್ನು ವಿವಾಹವಾಗಿದ್ದರು.ಇವರಿಗೆ ಇಬ್ಬರು ಮಕ್ಕಳಿದ್ದು ಹಾಗಾಗೆ ಕುಟುಂಬ ದಲ್ಲಿ ಕೌಟುಂಬಿಕ ಕಲಹ ಉಂಟಾಗುತ್ತಿತ್ತು. ಇಂದು ಮಮತ ಎಸ್ಪಿ ಬೇಟಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular