Friday, March 13, 2026
Flats for sale
Homeರಾಜಕೀಯಹಾಸನ : ಅಶ್ಲೀಲ ವಿಡಿಯೋ ವೈರಲ್ ಗೆ ಸ್ಫೋಟಕ ಟ್ವಿಸ್ಟ್ : ಪ್ರಜ್ವಲ್ ರೇವಣ್ಣ ಮಾಜಿ...

ಹಾಸನ : ಅಶ್ಲೀಲ ವಿಡಿಯೋ ವೈರಲ್ ಗೆ ಸ್ಫೋಟಕ ಟ್ವಿಸ್ಟ್ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಪೆನ್ಡ್ರೈವ್ ಮೊದಲು ಕೊಟ್ಟಿದ್ದು ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ..!

ಹಾಸನ : ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ,ಸಾಹಸಿ 2800 ವಿಡಿಯೋ ಚಿತ್ರದ ಒಡೆಯ ಸಂಸದ ಪ್ರಜ್ವಲ್ ರೇವಣ್ಣ ರವರ ಸೆಕ್ಸ್ ವಿಡಿಯೋ ದಿನಕ್ಕೊಂದು ತಿರುವುಪಡೆಯುತಿದ್ದು ಇದರಲ್ಲಿ ರಾಜಕೀಯ ನಾಯಕರ ಕೈವಾಡ ಇರುವುದು ಅಂತೂ ನಿಜ.

ಇದೀಗ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಶುರುವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಮೇಲೆ ಈ ಕೇಸ್ ಹಲವು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಇಂದು ಪ್ರಜ್ವಲ್ ರೇವಣ್ಣ ಅವರ ಬಳಿ 15 ವರ್ಷ ಡ್ರೈವರ್ ಆಗಿದ್ದ ಕಾರ್ತಿಕ್ ಸ್ಫೋಟಕ ಹೇಳಿಕೆ ನೀಡಿದ್ದು, ಹಾಸನದಲ್ಲಿ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ಯಾರು ಅನ್ನೋದರ ಬಗ್ಗೆಯೇ ಚರ್ಚೆಯಾಗುತ್ತಿದೆ.

ಇದೀಗ ಪ್ರಜ್ವಲ್ ರೇವಣ್ಣ ರವರ ಮಾಜಿ ಚಾಲಕ ಕಾರ್ತಿಕ್ ಹೇಳಿಕೆ ನೀಡಿದ್ದು ಬಾರಿ ಚರ್ಚೆಗೆ ಗ್ರಾಸವಾಗಿದೆ. ನಾನು ಕಳೆದ 15 ವರ್ಷಗಳಿಂದ ಪ್ರಜ್ವಲ್ ರೇವಣ್ಣನ ಕಾರು ಚಾಲಕನಾಗಿದ್ದೆ ಈಗ ಕಳೆದ ಒಂದು ವರ್ಷಗಳಿಂದ ನಾನು ಅಲ್ಲಿ ಕೆಲಸ ಮಾಡುತ್ತಿಲ್ಲ ಕಾರಣ ನನಗೆ ನನ್ನ ಜಮೀನನ್ನು ಬರೆಸಿಕೊಂಡು ನನ್ನ ಮೇಲೆ ಹಾಗೂ ನನ್ನ ಹೆಂಡ್ತಿ ಮೇಲೆ ಅಲ್ಲೇ ಮಾಡಿ ಸಾಕಷ್ಟು ಹಿಂಸೆ ಮಾನಸಿಕಂಸೆ ನೀಡಿರುತ್ತಾರೆ.ಈ ದೆಸೆಯಿಂದ ನಾನು ದೂರು ಕೊಡಲು ನಿರ್ಧಾರ ಮಾಡಿದೆ ಆದರೆ ದೂರು ಸ್ವೀಕರಿಸಲು ಇಲಾಖೆ ಮುಂದೆ ಬರಲಿಲ್ಲ ಆ ಸಂದರ್ಭದಲ್ಲಿ ಹಾಸನ ಜಿಲ್ಲಾ ಬಿಜೆಪಿ ಮುಖಂಡ ವಕೀಲರು ದೇವರಾಜ ಗೌಡ್ರು ಅವರಿಗೆ ನಾನು ಕೆಲವು ವಿಚಾರಗಳನ್ನು ತಿಳಿಸಿದೆ ಆಮೇಲೆ ನನ್ನಲ್ಲಿ ಇರತಕ್ಕಂತ ಮಾಹಿತಿಗಳನ್ನು ದೇವರಾಜ ಗೌಡರಿಗೆ ಕೊಟ್ಟಿದ್ದೆ ಈಗ ದೇವರಾಜ ಗೌಡರು ಅವರ ವೈಯಕ್ತಿಕವಾಗಿ ಅವರ ಮೇಲೆ ದ್ವೇಷಿಸುತ್ತಿದ್ದು ಕಾಂಗ್ರೆಸ್ ಮುಖಂಡರಿಗೆ ನಾನು ಯಾವುದೇ ವಿಡಿಯೋ ತುಣುಕುಗಳನ್ನು ನೀಡಿರುವುದಿಲ್ಲ ನಾನು ಸಂಪೂರ್ಣ ವಿಡಿಯೋ ತುಣುಕುಗಳನ್ನು ನೀಡಿರುವುದು ದೇವರಾಜ ಗೌಡ್ರಿಗೆ ಈಗ ಕಾಂಗ್ರೆಸ್ ನಾಯಕರಿಗೆ ನಾನು ಯಾವುದು ತುಳುಕು ನೀಡಿರುವುದಿಲ್ಲ ಈಗ ಅವರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾರು ಚಾಲಕ ಕಾರ್ತಿಕ್ ಹೇಳಿಕೆ ನೀಡಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಕಾರು ಚಾಲಕನಾಗಿದ್ದ ಕಾರ್ತಿಕ್ ಇದೀಗ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಎಸ್‌ಐಟಿ ವಿಚಾರಣೆಗೆ ತೆರಳುವ ಮುನ್ನ ಡ್ರೈವರ್ ಕಾರ್ತಿಕ್ ವಿಡಿಯೋ ಮಾಡಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಅವರ ಮೇಲೆ ಆರೋಪ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular