Friday, January 16, 2026
Flats for sale
Homeರಾಜ್ಯಹಾಸನ : ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಚಿಕಿತ್ಸೆ ಕೊಡಿಸುವ ವಿಚಾರದಲ್ಲಿ ಆಸ್ಪತ್ರೆ ಆವರಣದಲ್ಲೇ ಸಂಬಂಧಿಕರ ಮಾರಾಮಾರಿ.

ಹಾಸನ : ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಚಿಕಿತ್ಸೆ ಕೊಡಿಸುವ ವಿಚಾರದಲ್ಲಿ ಆಸ್ಪತ್ರೆ ಆವರಣದಲ್ಲೇ ಸಂಬಂಧಿಕರ ಮಾರಾಮಾರಿ.

ಹಾಸನ : ​ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಚಿಕಿತ್ಸೆ ಕೊಡಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಸಂಘರ್ಷ ನಡೆದ ಘಟನೆ ಹಾಸನದಲ್ಲಿ ನಡೆದಿದೆ.

​ತಾಯಿಯನ್ನು ನೋಡಲು ಬಂದ ಸಹೋದರ ಹಾಗೂ ಅಕ್ಕನ ಕುಟುಂಬದ ಸದಸ್ಯರ ನಡುವೆ ಶುರುವಾದ ಜಗಳ ವಿಕೋಪಕ್ಕೆ ಏರಿದ್ದು ಹಾಸನ ನಗರದ ಆರ್.ಸಿ. ರಸ್ತೆಯ ಖಾಸಗಿ ಆಸ್ಪತ್ರೆ ಮುಂಭಾಗದಲ್ಲೇ ಸಂಬಂಧಿಕರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.

ಮಹಿಳೆಯರು ಪರಸ್ಪರ ಜಡೆ ಹಿಡಿದು ಎಳೆದಾಡಿಕೊಂಡರೆ, ಪುರುಷರು ಕೈಗೆ ಸಿಕ್ಕ ವಸ್ತುಗಳಿಂದಲೇ ಬಡಿದಾಡಿಕೊಂಡಿದ್ದಾರೆ. ಇವರೆಲ್ಲರೂ ಹಾಸನ ತಾಲ್ಲೂಕಿನ ದುದ್ದ ಸಮೀಪದ ಹಳೆಕೊಪ್ಪಲು ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular