ಹಾಸನ : ಹಾಸನದ ಅಧಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ಇಂದು ಅಧಿಕೃತ ತೆರೆ ಬೀಳಲಿದೆ,ಸಂಪ್ರದಾಯದಂತೆ ರಾತ್ರಿ ವಿಜೃಂಭಣೆಯಿಂದ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಿತು,ಜಾತ್ರಾ ಮಹೋತ್ಸವ ಹಿನ್ನೆಲೆ ಕೆಂಡ ಹಾಯುವ ಸಂಪ್ರದಾಯ ಆಚರಣೆಯಲ್ಲಿ ದೇವಸ್ಥಾನದ ಮುಂದೆ ಕೆಂಡ ದೇವಿಯ ಕೃಪೆಗೆ ಪಾತ್ರರಾದರು.
ಸಂಪ್ರದಾಯದಂತೆ ಈ ಹಿಂದಿನಿಂದಲೂ ಕೆಂಡಹಾಯುವ ಪದ್ಧತಿ ನಡೆಸಿಕೊಂಡು ಬರಲಾಗುತ್ತಿದೆ.ಇಂದು ಮಧ್ಯಾಹ್ನದ ನಂತರ ಹಾಸನಾಂಬ ದೇವಿಯ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಸಹ ಕೆಂಡ ಹಾಯ್ದು ಭಕ್ತಿ ಭಾವ ಮೆರೆದರು. ಕಳಶ ಹೊತ್ತ ಭಕ್ತರು ಕೆಂಡ ಹಾಯ್ದಿದ್ದು ನೋಡಿ ನನಗೂ ಕೆಂಡ ಹಾಯುವ ಇಂಗಿತ ಬಂತು. ನಾನೆಂದೂ ಕೆಂಡ ಹಾಯ್ದಿರಲಿಲ್ಲ. ಮೊದಲಿಗೆ ಭಯ ಇತ್ತು. ಆದರೆ ದೇವರ ಮೇಲಿನ ಭಕ್ತಿಯಿಂದ ಕೈ ಮುಗಿದು ಹೋದೆ. ಏನೂ ಆಗಲಿಲ್ಲ ಎಂದು ಅವರು ನಂತರ ಅನುಭವ ಹಂಚಿಕೊಂಡರು.ಒಟ್ಟಿನಲ್ಲಿ ಹಾಸನಾಂಬ ದೇವಿಯ ದರ್ಶನ ಪಡೆಯಲು ಭಕ್ತರು ವರ್ಷ ಕಾಯಬೇಕಾಗಿದೆ.